Thursday, October 6, 2022
Powertv Logo
Homeವಿದೇಶಧವನ್, ರಾಹುಲ್ , ಕೊಹ್ಲಿ ಜಬರ್ದಸ್ತ್​​ ಬ್ಯಾಟಿಂಗ್ ; ಆಸೀಸ್​ಗೆ ಬಿಗ್​​​​​ ಟಾರ್ಗೆಟ್​!

ಧವನ್, ರಾಹುಲ್ , ಕೊಹ್ಲಿ ಜಬರ್ದಸ್ತ್​​ ಬ್ಯಾಟಿಂಗ್ ; ಆಸೀಸ್​ಗೆ ಬಿಗ್​​​​​ ಟಾರ್ಗೆಟ್​!

ರಾಜ್​​ಕೋಟ್​ : ಓಪನರ್ ಶಿಖರ್ ಧವನ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಜಬರ್ದಸ್ತ್​​ ಬ್ಯಾಟಿಂಗ್ ನೆರವಿನಿಂದ ಭಾರತ ಪ್ರವಾಸಿ ಆಸ್ಟ್ರೇಲಿಯಾಕ್ಕೆ 341ರನ್​ಗಳ ಬಿಗ್​ ಟಾರ್ಗೆಟ್ ನೀಡಿದೆ.
ರಾಜ್​​ಕೋಟ್​ನ ಸೌರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಎರಡನೇ ಒಡಿಐನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಆದರೆ, ಮೊದಲ ಪಂದ್ಯದಂತೆ ಭಾರತದ ಬ್ಯಾಟ್ಸ್​ಮನ್​ಗಳನ್ನು ಪಟಪಟನೆ ಪೆವಿಲಿಯನ್​ಗೆ ಅಟ್ಟುವ ಆಸೀಸ್ ಲೆಕ್ಕಾಚಾರ ತಲೆಕೆಳಗಾಯಿತು.
ಇನ್ನಿಂಗ್ಸ್​ ಆರಂಭಿಸಿದ ರೋಹಿತ್​ ಶರ್ಮಾ (42) , ಶಿಖರ್ ಧವನ್ (96) 81ರನ್​ಗಳ ಜೊತೆಯಾಟವಾಡಿ ಉತ್ತಮ ಆರಂಭವನ್ನು ಕಲ್ಪಿಸಿದ್ರು. ರೋಹಿತ್ ಶರ್ಮಾ ಔಟಾದ ಬಳಿಕ ಬಂದ ವಿರಾಟ್ ಕೊಹ್ಲಿ ಧವನ್ ಜೊತೆ ಸೇರಿ ಶತಕದ ಜೊತೆಯಾಟವಾಡಿದ್ರು. 103ರನ್​ಗಳ ಪಾರ್ಟನರ್ಶಿಪ್ ಬೆನ್ನಲ್ಲೇ ತಂಡದ ಮೊತ್ತ 184ರನ್ ಆಗಿದ್ದಾಗ ಧವನ್ ಕೇವಲ 4ರನ್​ಗಳಿಂದ ಸೆಂಚುರಿ ಮಿಸ್​ ಮಾಡ್ಕೊಂಡು ಪೆವಿಲಿಯನ್​ಗೆ ಸೇರಿದ್ರು. ಬಳಿಕ ಬಂದ ಶ್ರೇಯಸ್ ಅಯ್ಯರ್​ 7ರನ್ ಮಾಡಿ ನಿರಾಸೆ ಮೂಡಿಸಿದ್ರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​ಗೆ ಇಳಿದ ಕನ್ನಡಿಗ ಕೆ.ಎಲ್ ರಾಹುಲ್ 52 ಬಾಲ್​ಗಳಲ್ಲಿ 80ರನ್​ ಬಾರಿಸಿ ಆಸೀಸ್​ ಬೌಲರ್​ಗಳನ್ನು ಕಾಡಿದ್ರು. ಕೊಹ್ಲಿ 78ರನ್ ಮಾಡಿ ಮಿಂಚಿದ್ರು. ಅಂತಿಮವಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳ್ಕೊಂಡು 340ರನ್ ಮಾಡಿತು.

- Advertisment -

Most Popular

Recent Comments