Saturday, May 28, 2022
Powertv Logo
Homeವಿದೇಶಆಸೀಸ್​​ಗೆ ಧವನ್, 'ರಾಹು'ಲ್​​ ಕಾಟ - ಭಾರತಕ್ಕೆ 'ವಿರಾಟ' ವಿಜಯ!

ಆಸೀಸ್​​ಗೆ ಧವನ್, ‘ರಾಹು’ಲ್​​ ಕಾಟ – ಭಾರತಕ್ಕೆ ‘ವಿರಾಟ’ ವಿಜಯ!

ರಾಜ್​​ಕೋಟ್​ : ಓಪನರ್ ಶಿಖರ್ ಧವನ್, ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಜಬರ್ದಸ್ತ್​​ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಶಮಿ ಸೇರಿದಂತೆ ಬೌಲರ್​ಗಳ ಸಂಘಟಿತ ದಾಳಿ ನೆರವಿನಿಂದ ಟೀಮ್ ಇಂಡಿಯಾ ಆಸೀಸ್​ ವಿರುದ್ಧ 36 ರನ್​​ಗಳ ‘ವಿರಾಟ’ ವಿಜಯ ದಾಖಲಿಸಿದೆ.
ರಾಜ್​​ಕೋಟ್​ನ ಸೌರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಸ್ಟೇಡಿಯಂನಲ್ಲಿ ನಡೆದ ಎರಡನೇ ಒಡಿಐನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಆದರೆ, ಮೊದಲ ಪಂದ್ಯದಂತೆ ಭಾರತದ ಬ್ಯಾಟ್ಸ್​ಮನ್​ಗಳನ್ನು ಪಟಪಟನೆ ಪೆವಿಲಿಯನ್​ಗೆ ಅಟ್ಟುವ ಆಸೀಸ್ ಲೆಕ್ಕಾಚಾರ ತಲೆಕೆಳಗಾಯಿತು. ಇನ್ನಿಂಗ್ಸ್​ ಆರಂಭಿಸಿದ ರೋಹಿತ್​ ಶರ್ಮಾ (42) , ಶಿಖರ್ ಧವನ್ (96) 81ರನ್​ಗಳ ಜೊತೆಯಾಟವಾಡಿ ಉತ್ತಮ ಆರಂಭವನ್ನು ಕಲ್ಪಿಸಿದ್ರು. ರೋಹಿತ್ ಶರ್ಮಾ ಔಟಾದ ಬಳಿಕ ಬಂದ ವಿರಾಟ್ ಕೊಹ್ಲಿ ಧವನ್ ಜೊತೆ ಸೇರಿ ಶತಕದ ಜೊತೆಯಾಟವಾಡಿದ್ರು. 103ರನ್​ಗಳ ಪಾರ್ಟನರ್ಶಿಪ್ ಬೆನ್ನಲ್ಲೇ ತಂಡದ ಮೊತ್ತ 184ರನ್ ಆಗಿದ್ದಾಗ ಧವನ್ ಕೇವಲ 4ರನ್​ಗಳಿಂದ ಸೆಂಚುರಿ ಮಿಸ್​ ಮಾಡ್ಕೊಂಡು ಪೆವಿಲಿಯನ್​ಗೆ ಸೇರಿದ್ರು. ಬಳಿಕ ಬಂದ ಶ್ರೇಯಸ್ ಅಯ್ಯರ್​ 7ರನ್ ಮಾಡಿ ನಿರಾಸೆ ಮೂಡಿಸಿದ್ರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​ಗೆ ಇಳಿದ ಕನ್ನಡಿಗ ಕೆ.ಎಲ್ ರಾಹುಲ್ 52 ಬಾಲ್​ಗಳಲ್ಲಿ 80ರನ್​ ಬಾರಿಸಿ ಆಸೀಸ್​ ಬೌಲರ್​ಗಳನ್ನು ಕಾಡಿದ್ರು. ಕೊಹ್ಲಿ 78ರನ್ ಮಾಡಿ ಮಿಂಚಿದ್ರು. ಅಂತಿಮವಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳ್ಕೊಂಡು 340ರನ್ ಮಾಡಿತು.
ಗುರಿ ಬೆನ್ನತ್ತಿದ ಆಸೀಸ್​ಗೆ ಶಮಿ 3 ವಿಕೆಟ್​, ಸೈನಿ, ಜಡೇಜಾ, ಕುಲ್​ದೀಪ್ ಯಾದವ್ ತಲಾ 2 ಹಾಗೂ ಬೂಮ್ರಾ 1 ವಿಕೆಟ್ ಕಿತ್ತು ಶಾಕ್ ನೀಡಿದ್ರು. ಆಸೀಸ್ ಪರ ಸ್ಮಿತ್ 98ರನ್ ಸಿಡಿಸಿ ಕೆಲ ಹೊತ್ತು ಭಾರತದ ಬೌಲರ್​ಗಳನ್ನು ಕಾಡಿದರೂ ಪಂದ್ಯ ಗೆಲ್ಲಿಸಲು ಆಗಲಿಲ್ಲ. 49.9 ಓವರ್ ಗಳಲ್ಲಿ ಆಸೀಸ್ 304ರನ್​ಗಳಿಗೆ ಆಲೌಟ್ ಆಯಿತು.
ಸದ್ಯ ಸರಣಿ 1-1ರಿಂದ ಸಮಬಲ ಕಂಡಿದ್ದು, ಜನವರಿ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments