Home ದೇಶ-ವಿದೇಶ ವಿಶ್ವದ ಸೋಂಕಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ : ಕಳೆದ 24 ಗಂಟೆಯಲ್ಲಿ 7 ಸಾವಿರಕ್ಕೂ...

ವಿಶ್ವದ ಸೋಂಕಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ : ಕಳೆದ 24 ಗಂಟೆಯಲ್ಲಿ 7 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೋನಾ ಪಾಸಿಟಿವ್ 

ನವದೆಹಲಿ: ವಿಶ್ವದ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಭಾರತವೂ ಒಂಭತ್ತನೇ ಸ್ಥಾನಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ 7 ಸಾವಿರಕ್ಕಿಂತ ಅಧಿಕ ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಒಟ್ಟು 1,65,799 ಜನ ಸೋಂಕಿಗೆ ತುತ್ತಾಗಿದ್ದಾರೆ. ಒಂದೇ ದಿನದಲ್ಲಿ ಕೊರೋನಾ 175 ಜನರನ್ನು ಬಲಿ ಪಡೆದುಕೊಂಡಿದ್ದು, ಒಟ್ಟು 4,706 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದರ ನಡುವೆಯೇ 71,106 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದಲ್ಲೂ ಕೊರೋನಾ ಸೋಂಕಿತರ ಅಂಕಿಅಂಶಕ್ಕನುಗುಣವಾಗಿ ರಾಜ್ಯಗಳನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ  ಮೊದಲಿನಿಂದಲೇ ಮಹಾರಾಷ್ಟ್ರವೇ ಮುಂಚೂಣಿಯಲ್ಲಿದ್ದು, ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲೇ  2 ಸಾವಿರದ 500ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ 59,546 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು 85 ಎಷ್ಟು ಜನ ಸಾವನ್ನಪ್ಪಿದ್ದು, ಈವರೆಗೆ  ಮೃತಪಟ್ಟವರ ಸಂಖ್ಯೆಯೂ 2 ಸಾವಿರದ ಅಂಚಿನಲ್ಲಿದೆ.

ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 827 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 19,372 ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ಇಂದಿಗೆ 12 ಸಾವನ್ನಪ್ಪಿದ್ದು, ಒಟ್ಟು 145 ಜನ ಸೋಂಕಿತರು ಮೃತಪಟ್ಟಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಇನ್ನು ದೆಹಲಿ ಹಾಗೂ ಗುಜರಾತ್ ನಡುವೆ  ಸೋಂಕಿತರ ಸಂಖ್ಯೆಯ ಏರಿಕೆಯಲ್ಲಿ ಪೈಪೋಟಿಯಂತಾಗಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 16 ಸಾವಿರಕ್ಕೆ ಏರಿದ್ದರೆ, ಗುಜರಾತ್​ನಲ್ಲಿ 15 ಸಾವಿರಕ್ಕೆ ಏರಿದೆ. ಇನ್ನು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ದೆಹಲಿಯಲ್ಲಿ 316, ಗುರಾತ್​ನಲ್ಲಿ 960 ಜನ ಈವರೆಗೆ ಮೃತಪಟ್ಟಿದ್ದಾರೆ. 

LEAVE A REPLY

Please enter your comment!
Please enter your name here

- Advertisment -

Most Popular

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ...

Recent Comments