ಉಗ್ರರ ಅಡಗುತಾಣಗಳ ಮೇಲೆ ಏರ್ ಸರ್ಜಿಕಲ್​ ಸ್ಟ್ರೈಕ್​..!

0
499

ನವದೆಹಲಿ: ಗಡಿನಿಯಂತ್ರಣ ರೇಖೆಯಲ್ಲಿ ಉಗ್ರರ ಕ್ಯಾಂಪ್​ ಮೇಲೆ ಭಾರತದ ಸೇನೆ ಇಂದು ಬೆಳಗ್ಗೆ 3.30ರ ವೇಳೆಗೆ ದಾಳಿ ನಡೆಸಿದೆ. 12 ಮಿರಾಜ್​, 2000 ಜೆಟ್​ಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಉಗ್ರರ ಅಡಗುತಾಣಗಳ ಮೇಲೆ 1,000 ಕಿಜಿ ಬಾಂಬ್​ಗಳ ದಾಳಿ ಮಾಡಲಾಗಿದೆ. ಸೇನಾ ದಾಳಿಯಲ್ಲಿ 500 ಮೀಟರ್​​ ಜಾಗ ಸಂಪೂರ್ಣ ನಾಶವಾಗಿದೆ. ಪೂರ್ವ ನಿಯೋಜಿತ ದಾಳಿ ಯಶಸ್ವಿಯಾಗಿದ್ದು, ಸೇನೆ ಪ್ಲಾನ್ ಮಾಡಿರುವಂತೆಯೇ ನಡೆದಿದೆ ಎಂದು ತಿಳಿದುಬಂದಿದೆ.

ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಸೇನಾ ವಾಹನದ ಮೇಲೆ ಜೈಷ್​-ಇ-ಮಹಮ್ಮದ್​ ಉಗ್ರ ಸಂಘಟನೆ ದಾಳಿ ನಡೆಸಿದ ಎರಡೇ ವಾರದಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಪುಲ್ವಾಮಾ ದಾಳಿ ನಡೆದ ನಂತರ ಜೈಷ್​-ಇ-ಮಹಮ್ಮದ್​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಝರ್​ನ್ನು ಯುಎನ್ ಗುರುತಿಸಿದ ಅಂತಾರಾಷ್ಟ್ರೀಯ ಭಯೋತ್ಪಾದಕನಾಗಿ ಗುರುತಿಸಬೇಕಾಗಿ ಭಾರತ ಕೇಳಿಕೊಂಡಿತ್ತು. ಪುಲ್ವಾಮಾ ದಾಳಿಯನ್ನು ಹಲವು ರಾಷ್ಟ್ರಗಳು ಖಂಡಿಸಿದ್ದು, ಭಯೋತ್ಪಾದನೆಗೆದುರಾಗಿ ತಮ್ಮ ಬೆಂಬಲ ಸೂಚಿಸಿವೆ. 2016ರ ಸೆಪ್ಟೆಂಬರ್​ 29ರಂದು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.  

LEAVE A REPLY

Please enter your comment!
Please enter your name here