ಪಾಕ್​ ಹಿಡಿದಿಟ್ಟುಕೊಂಡಿರೋ ಮನೆಮಗನನ್ನು ಬಿಡಿಸಲು ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಭಾರತದ ವಾದ..!

0
239

ದಿ.ಹೇಗ್ : ಪಾಕಿಸ್ತಾನ ಹಿಡಿದಿಟ್ಟು ಕೊಂಡಿರುವ ಮನೆಮಗನನ್ನು ಬಿಡಿಸಲು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಹೋರಾಟವನ್ನು ನಡೆಸುತ್ತಿದೆ.
ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಆಗಿರುವ ಕುಲಭೂಷಣ್ ಜಾಧವ್​​ ಅವರು ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದೆ. ಇಂದಿನಿಂದ ವಿಚಾರಣೆ ಆರಂಭವಾಗಿದೆ. ನಾಲ್ಕು ದಿನಗಳ ಕಾಲ ವಿಚಾರಣೆ ನಡೆಯಲಿದೆ.
ಇಂದು ಕುಲಭೂಷಣ್​ ಜಾಧವ್ ಅವರಿಗೆ ನ್ಯಾಯಕೊಡಿಸಲು ಭಾರತದ ಪರ ಹರೀಶ್ ಸಾಳ್ವೆ ವಾದ ಮಂಡಿಸಿದ್ರು. ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರ ಪ್ರಕರಣವನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ತಾ ಇದೆ, ಪಾಕ್ ಬಳಿ ಪ್ರಕರಣಕ್ಕೆ ಸಂಬಂಧಪ್ಟಂತೆ ಯಾವ್ದೇ ಸಾಕ್ಷ್ಯಾಧಾರಗಳಿಲ್ಲ. ಅದು ವಿಯೆನ್ನಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾದ ಮಂಡನೆ ಮಾಡಿದ್ರು.

LEAVE A REPLY

Please enter your comment!
Please enter your name here