ಕಾಶ್ಮೀರದಲ್ಲಿ 200ಕ್ಕೂ ಹೆಚ್ಚು ಪ್ರತ್ಯೇಕವಾದಿಗಳು ಅರೆಸ್ಟ್

0
272

ಶ್ರೀನಗರ : ಪುಲ್ವಾಮಾ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪಾಕ್​ ಬೆಂಬಲಿಗರ ವಿರುದ್ಧ ಕೇಂದ್ರ ಸಮರ ಮುಂದುವರೆಸಿದ್ದು ಪ್ರತ್ಯೇಕವಾದಿ ನಾಯಕರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಪ್ರತ್ಯೇಕವಾದಿಗಳನ್ನು ಅರೆಸ್ಟ್ ಮಾಡಲಾಗಿದೆ.
ಶುಕ್ರವಾರ ತಡರಾತ್ರಿ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಜೆಕೆಎಲ್​ಎಫ್ ಮುಖ್ಯಸ್ಥ ಯಾಸಿನ್ ಮಲಿಕ್, ಜಮಾತ್ – ಇ – ಇಸ್ಲಾಂ ಮುಖ್ಯಸ್ಥ ಅಬ್ದುಲ್​ ಹಮೀದ್​ ಫಯಾಜ್​ ಮತ್ತಿತರರನ್ನು ಅರೆಸ್ಟ್ ಮಾಡಲಾಗಿತ್ತು. ಸದ್ಯದ ಮಾಹಿತಿಯಂತೆ ಇಲ್ಲಿಯವರೆಗೆ ಸುಮಾರು 200 ಮಂದಿ ಪ್ರತ್ಯೇಕತಾವಾದಿಗಳನ್ನು ಬಂಧಿಸಿದ್ದಾರೆ.
ಸದ್ಯ ಜಮ್ಮು-ಕಾಶ್ಮೀರದಲ್ಲಿ ಆತಂಕದ ವಾತಾವರಣವಿದ್ದು, ಬಿಗಿ ಬಂದೋಬಸ್ತ್​​ ಮಾಡಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ನಾಳೆ ಸುಪ್ರೀಂಕೋರ್ಟ್​ನಲ್ಲಿ 35(A) ವಿಚಾರಣೆ ನಡೆಯಲಿದೆ.

LEAVE A REPLY

Please enter your comment!
Please enter your name here