Sunday, June 26, 2022
Powertv Logo
Homeವಿದೇಶಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್ ಆಯ್ಕೆ

ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರೋ 4ನೇ ಒಡಿಐನಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
5 ಮ್ಯಾಚ್ ಗಳ ಒಡಿಐ ಟೂರ್ನಿ ಇದಾಗಿದ್ದು ಎರಡೂ ಟೀಮ್ ಗಳು ತಲಾ ಒಂದೊಂದು ಮ್ಯಾಚ್ ಗೆದ್ದಿವೆ. ಫಸ್ಟ್ ಮ್ಯಾಚ್ ಅನ್ನು ಟೀಮ್ ಇಂಡಿಯಾ, 3ನೇ ಮ್ಯಾಚ್ ಅನ್ನು ವೆಸ್ಟ್ ಇಂಡೀಸ್ ಗೆದ್ದಿದ್ದು, 2ನೇ ಮ್ಯಾಚ್ ಟೈ ಆಗಿತ್ತು. ಇದ್ರಿಂದಾಗಿ ಎರಡೂ ಟೀಮ್ ಗಳಿಗೂ ಈ ಮ್ಯಾಚ್ ಪ್ರಮುಖವಾಗಿದೆ. ಇಂದಿನ ಮ್ಯಾಚ್ ಅನ್ನು ಸೋತ ಟೀಮ್ ಕೊನಯ ಮ್ಯಾಚ್ ನಲ್ಲಿ ಸರಣಿ ಸಮಬಲಕ್ಕೆ ಗೆಲ್ಲಲ್ಲೇ ಬೇಕಾದ ಒತ್ತಡಕ್ಕೆ ಸಿಲುಕುತ್ತದೆ.
ವಿಶ್ವದ ಪ್ರಬಲ ಟೀಮ್ ಆಗಿರೋ ಇಂಡಿಯಾಕ್ಕೆ ಇದು ಪ್ರತಿಷ್ಠೆಯ ಮ್ಯಾಚ್ ಆಗಿದೆ. ಟೀಮ್ ಇಂಡಿಯಾಕ್ಕೆ ಈಗಾಗಲೇ ಸತತ ಮೂರು ಸೆಂಚುರಿ ಬಾರಿಸಿರೋ ಕ್ಯಾಪ್ಟನ್ ಕೊಹ್ಲಿ ಬಲವಿದೆ.

ಹೀಗಿದೆ ಪ್ಲೇಯಿಂಗ್ 11: 

ಭಾರತ : ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಕ್ಯಾಪ್ಟನ್ ), ಅಂಬಾಟಿ ರಾಯುಡು, ಎಂಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲ್ದೀಪ್ ಯಾದವ್, ಕೆ ಖಲೀಲ್ ಅಹ್ಮದ್, ಜಸ್ಪ್ರಿತ್ ಬುಮ್ರಾ.

ವೆಸ್ಟ್ ಇಂಡೀಸ್ : ಕೀರನ್ ಪೊವೆಲ್, ಚಂದ್ರಪಾಲ್ ಹೇಮ್ರಾಜ್, ಶೈ ಹೋಪ್ (ವಿಕೆಟ್ ಕೀಪರ್ ), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್ (ಕ್ಯಾಪ್ಟನ್ ), ಫ್ಯಾಬಿಯನ್ ಅಲೆನ್, ಆಶ್ಲೆ ನರ್ಸ್, ಕೆಮರ್ ರೋಚ್, ಕೀಮೊ ಪಾಲ್.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments