ಭಾರತದ ಮಾರುಕಟ್ಟೆಗೆ 5G ಸ್ಮಾರ್ಟ್​ಫೋನ್..!

0
316

ನವದೆಹಲಿ: 2G, 3G, 4G ಆಯ್ತು ಇನ್ನೇನಿದ್ರು  5G ಜಮಾನ..! ಈ ತಂತ್ರಜ್ಞಾನವೇ ಹಾಗೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತೆ. ಹಾಗೆಯೇ ಚೀನಾ ಮೂಲದ IQ003 ಕಂಪೆನಿ 5G ಸ್ಮಾರ್ಟ್ ಫೋನೋಂದನ್ನು ಉತ್ಪಾದಿಸಿದೆ. ಈ ಸ್ಮಾರ್ಟ್ ಫೋನ್ ಫೆಬ್ರವರಿ 25 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಈ ಕಂಪೆನಿಯು ವಿವೋ ಸ್ಮಾರ್ಟ್​ಫೋನಿನ ಸಬ್ ಬ್ರ್ಯಾಂಡ್ ಆಗಿದ್ದು, ಮೂಲ ಕಂಪೆನಿಯಿಂದ ಬೇರ್ಪಟ್ಟು ಹೊಸದಾಗಿ ಸ್ಮಾರ್ಟ್​ಫೋನನ್ನು ಉತ್ಪಾದಿಸಿದೆ. ಇದು ದೇಶದ ಮೊದಲ 5G ಫೋನ್ ಆಗಿದೆ.  ಈ ಫೋನ್ 6.4 ಇಂಚಿನ ಫುಲ್ ಹೆಚ್ ಡಿ ಪ್ಲಸ್ ಅಮೋಲ್ಡ್ ಡಿಸ್ ಪ್ಲೇ ಹೊಂದಿದೆ. 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇದೆ. ಅಲ್ಲದೆ ಪ್ರೊಸೆಸರ್ ಕ್ವಾಲ್ ಕ್ವಾಂ ಸ್ನ್ಯಾಪ್ ಡ್ರ್ಯಾಗನ್ 865 ಸಾಮಾರ್ಥ್ಯವನ್ನು ಹೊಂದಿದ್ದು, ಆ್ಯಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದಿರುತ್ತದೆ. ಈ ಸ್ಮಾರ್ಟ್ ಫೋನ್ 6GB, 8GB, 12GB ಗಳಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ ಸ್ಟೋರೇಜ್ 128GB ಮತ್ತು 256GB ಇದೆ.

ಇನ್ನು ಕ್ಯಾಮೆರಾ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾ ಸೇರಿದಂತೆ ಮೂರು ಕ್ಯಾಮೆರಾಗಳು ಹೊಂದಿದೆ. ಸೆಲ್ಫಿ ಕ್ಯಾಮೆರಾ 16ಎಂಎಪಿ ಆಗಿದೆ. ಇದರ ಬ್ಯಾಟರಿ ಸಾಮಾರ್ಥ್ಯ 4,400mAh. ಈ ಪೋನ್ ವಾಲ್ಕೆನೋ ಆರೆಂಜ್, ಟೊರ್ನಾಡೋ ಬ್ಲ್ಯಾಕ್, ಕ್ವಾಂಟಂ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಫೋನಿನ ಬೆಲೆ 45,000 ರೂಪಾಯಿಗಳಾಗಿದೆ. ಇನ್ನು ಇದರ 4G ಮಾದರಿಗಳ ಬೆಲೆ 35,000 ರೂಪಾಯಿ ಆಗಿದೆ.

 

LEAVE A REPLY

Please enter your comment!
Please enter your name here