ನವದೆಹಲಿ: ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ದೇಶದಾದ್ಯಂತ ಹೊರಡಿಸಲಾಗಿದ್ದ 21ದಿನಗಳ ಲಾಕ್ಡೌನ್ ಆದೇಶವೂ ಇಂದಿಗೆ ಕೊನೆಗೊಳ್ಳುತ್ತಿದೆ. ಈ ಬಗ್ಗೆ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಬೇಕಾದರೆ ಲಾಕ್ಡೌನ್ ಬಿಟ್ಟರೆ ಬೇರೆ ಮಾರ್ಗವಿಲ್ಲ. ಹಾಗಾಗಿ ಮೇ 3 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಇನ್ನೊಂದು ವಾರ ನಮಗೆ ಸವಾಲಿನ ಸಮಯ, ನಾವು ಅದನ್ನು ಗೆಲ್ಲಲೇಬೇಕು. ಲಾಕ್ಡೌನ್ನಿಂದ ದೇಶದ ಜನತೆಗೆ ಕಷ್ಟವಾಗುತ್ತಿದೆ ಆದರೂ ಲಾಕ್ಡೌನ್ ತುಂಬಾ ಅನಿವಾರ್ಯ. ಅಲ್ಲದೆ ದೇಶದ ಆರ್ಥಿಕತೆಗೂ ತೊಂದರೆಯಾಗುತ್ತಿದೆ. ಆದರೆ ಇದೆಲ್ಲದಲಕ್ಕಿಂತ ಜನರ ಪ್ರಾಣವೇ ಮುಖ್ಯ. ಇನ್ನು ಮುಂದಿನ ದಿನಗಳಲ್ಲಿ ಲಾಕ್ಡೌನ್ ಯಾವ ರೀತಿ ಇರಲಿದೆ ಎಂಬ ಮಾರ್ಗಸೂಚಿಗಳನ್ನು ನಾಳೆ ಹೇಳಲಾಗುತ್ತದೆ‘ಎಂದು ಹೇಳಿದ್ದಾರೆ.
ಇನ್ನು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ. ಉಳಿದ ರಾಷ್ಟ್ರಗಳಲ್ಲಿ ಶೇ.25 ರಿಂದ ಶೇ.30 ರಷ್ಟು ಸೋಂಕು ವ್ಯಾಪಿಸಿದೆ. ದೇಶದ ಜನತೆ ಲಾಕ್ಡೌನ್ ಆದೇಶಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನೀವು ಕಷ್ಟಗಳ ನಡುವೆಯೂ ದೇಶದ ಜನರನ್ನು ರಕ್ಷಿಸಿದ್ದೀರಿ. ಪ್ರತಿಯೊಬ್ಬರು ದೇಶಕ್ಕಾಗಿ ಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಹಲವು ರಾಜ್ಯಗಳಲ್ಲಿ ಹೊಸ ಸಂವತ್ಸರವೇ ಪ್ರಾರಂಭವಾಗಿದೆ. ವಿವಿಧ ರಾಜ್ಯಗಳಲ್ಲಿ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದಾರೆ. ದೇಶದ ಜನ ಸಂಯಮದಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳುತ್ತಾ ದೇಶದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಕೊರೋನಾ ವಿರುದ್ಧ ದೇಶಕ್ಕಾಗಿ ಎಲ್ಲರೂ ಒಂದಾಗಿ ಹೋರಾಡೋಣ ಎಂದು ಕರೆ ಕೊಟ್ಟರು.
zithromax intravenous
zithromax over the counter walmart