Home P.Special ಕಾರ್ಗಿಲ್ ವಿಜಯಕ್ಕೆ 21ರ ಸಂಭ್ರಮ  | ಇಲ್ಲಿದೆ ಭಾರತ ‘ಪಾಪಿ’ಸ್ತಾನದ ಹೆಡೆಮುರಿಕಟ್ಟಿದ ರೋಚಕ ಇತಿಹಾಸ

ಕಾರ್ಗಿಲ್ ವಿಜಯಕ್ಕೆ 21ರ ಸಂಭ್ರಮ  | ಇಲ್ಲಿದೆ ಭಾರತ ‘ಪಾಪಿ’ಸ್ತಾನದ ಹೆಡೆಮುರಿಕಟ್ಟಿದ ರೋಚಕ ಇತಿಹಾಸ

ಜುಲೈ 26 … ಭಾರತದ ಇತಿಹಾಸದ ಪುಟದಲ್ಲಿ ಎಂದೂ.. ಎಂದೆಂದಿಗೂ.. ಯಾರೂ, ಯಾರೆಂದರೆ ಯಾರೂ ಮರೆಯಲಾಗದ ದಿನ. ಪಾಕಿಸ್ತಾನ ಅನ್ನೋ ಪಾಪಿ ರಾಷ್ಟ್ರಕ್ಕೆ ಭಾರತ ತಕ್ಕಪಾಠ ಕಲಿಸಿದ್ದ ದಿನವಿದು. ಭಾರತ ಚರಿತ್ರೆಯಲ್ಲಿನ ಆ ಸುದಿನಕ್ಕೆ ಇಂದಿಗೆ ಸರಿಯಾಗಿ 21 ವರ್ಷ.. ಹೌದು.. ಕಾರ್ಗಿಲ್ ವಿಜಯೋತ್ಸವಕ್ಕೆ 21ರ ಸಂಭ್ರಮ..  ನಮ್ಮ ಹೆಮ್ಮೆಯ ಯೋಧರು ಪಾಕಿಸ್ತಾನ ಹೆಡೆಮುರಿ ಕಟ್ಟಿದ್ದ ಹಬ್ಬದ ದಿನವಿದು..! ಈ ದಿನವನ್ನು ವಿಜಯ್ ದಿವಸವನ್ನಾಗಿ ಇಡೀ ದೇಶ ಸಂಭ್ರಮಿಸುತ್ತಿದೆ.

ಅದು 1999 ಪಾಕಿಸ್ತಾನ ಅನ್ನೋ ರಣಹೇಡಿ ರಾಷ್ಟ್ರ  ಕಾಲ್ಕೆರೆದುಕೊಂಡು ಬಂದು ಸೋತು ಸುಣ್ಣಾಗಿ ಬಾಲ ಮುದಿಡುಕೊಂಡು ಹೋಗಿತ್ತು. ಭಾರತ ಪಾಕಿಸ್ತಾಕ್ಕೆ ದಿಟ್ಟ ಉತ್ತರ ನೀಡಿ, ತಕ್ಕ ಪಾಠ ಕಲಿಸಿದ್ದ ಆ ಯುದ್ಧವೇ ಕಾರ್ಗಿಲ್ ಯುದ್ಧ.

ಅಂದಹಾಗೆ  ಕಾರ್ಗಿಲ್ ಯುದ್ಧ ನಡೆದಿದ್ದು 1999 ರ ಮೇ ತಿಂಗಳಿಂದ ಜುಲೈವರೆಗೆ. ಮೇ ನಲ್ಲಿ ಪಾಕ್ ಸೈನಿಕರು ಹಾಗೂ ಉಗ್ರರು ಕಾರ್ಗಿಲ್ ಜಿಲ್ಲೆಯಲ್ಲಿ ಲೈನ್ ಆಫ್ ಕಂಟ್ರೋಲ್ (ಎಲ್​ಒಸಿ) ಮೂಲಕ ಒಳನುಸುಳಿದ್ರು. ಪಾಪಿಗಳ ಕುತಂತ್ರ ಗೊತ್ತಾದ ಕೂಡ್ಲೇ ಭಾರತೀಯ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸ್ತು. ಆಪರೇಷನ್ ವಿಜಯ್ ಆರಂಭಿಸಿದ ಸೇನೆ ಪಾಪಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಕಾರ್ಗಿಲ್ ಯುದ್ಧದಲ್ಲಿ 120 ಸೈನಿಕರನ್ನು ಮುನ್ನಡೆಸಿದ್ದು 25 ರ ವೀರ…!

ಅಂದಿನ ಪಾಕ್​ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್​ ನೇ ಕಾರ್ಗಿಲ್ ಯುದ್ಧದ ಮಾಸ್ಟರ್ ಮೈಂಡ್ ಅಂತ ತಡವಾಗಿ ಗೊತ್ತಾಗಿತ್ತು. ಕಾಶ್ಮೀರದಲ್ಲಿ ಒಳನುಗ್ಗುವ ಯೋಜನೆಯನ್ನು ಬಹಳ ಅಚ್ಚುಕಟ್ಟಾಗಿ ಯೋಜಿಸಿದ್ದು ಅದೇ ಮುಷರಫ್. ಈ ಮುಷರಫ್​ಗೆ ಸಾಥ್ ನೀಡಿದ್ದು ಲೆಫ್ಟಿನೆಂಟ್​ ಜನರಲ್ ಮೊಹಮ್ಮದ್ ಆಜಿಜ್ ಮಾತ್ರ! ಅಚ್ಚರಿ ಅಂದ್ರೆ ಅಂದಿ ಪಾಕ್ ಪ್ರಧಾನಿ ನವಾಜ್​ ಷರೀಫ್​ ಅವರಿಗೂ ಈ ಬಗ್ಗೆ ಗೊತ್ತೇ ಇರ್ಲಿಲ್ಲ!

 ಪಾಕ್​ ಒಳನುಸುಳಿದ್ದು ತಿಳಿದ ಮೇಲೆ 1999 ಮೇ 24ರಂದು ಕಾರ್ಗಿಲ್ ಯುದ್ಧಕ್ಕೆ ವಾಯುಪಡೆಯನ್ನು ಬಳಸಿಕೊಳ್ಬೇಕೆಂದು ನಿರ್ಧರಿಸಲಾಯ್ತು. ಆದ್ರೆ ಯಾವ್ದೇ ಕಾರಣಕ್ಕೂ ಕೂಡ ಗಡಿ ನಿಯಂತ್ರಣ ರೇಖೆ ದಾಟಬಾರದೆಂಬುದು ನಿರ್ಣಯಕ್ಕೆ ಬರಲಾಯ್ತು. ತನ್ನ ಗಡಿಯೊಳಗೆ ಅವಿತಿದ್ದ ಪಾಕ್​ ಸೈನಿಕರ ಮೇಲೆ ವಾಯುಪಡೆಯು ಬಾಂಬ್ ದಾಳಿ ನಡೆಸಲಾರಂಭಿಸಿತು. ಡ್ರಾಸ್​ – ಕಾರ್ಗಿಲ್ ಪ್ರದೇಶದ ಟೈಗರ್ ಹಿಲ್ ಪ್ರಮುಖ ರಣರಂಗವಾಗಿತ್ತು. ಸತತ 60 ದಿನಗಳ ಕಾಲ ಯುದ್ಧ ನಡೆಯಿತು.

ಅಂತಿಮವಾಗಿ ನಮ್ಮ ಯೋಧರು ಟೈಗರ್‌ ಹಿಲ್‌ ಅನ್ನು ಮರು ಸ್ವಾಧಿಧೀನಕ್ಕೆ ಪಡೆದು, ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಲ ಯಶಸ್ವಿಯಾದರು. ಯುದ್ಧದಲ್ಲಿ 527 ಮಂದಿ ಭಾರತದ ಯೋಧರು ಹುತಾತ್ಮರಾದ್ರು.1,363 ಮಂದಿ ಗಾಯಗೊಂಡ್ರು.

ರಣರಂಗದ ಹೀರೋಗಳಾದ ಸಂಜಯ್‌ ಕುಮಾರ್‌, ನಯಿಬ್‌ ಸುಬೇದಾರ್‌ ಯೋಗೇಂದ್ರ ಸಿಂಗ್‌ ಯಾದವ್‌, ಕ್ಯಾಪ್ಟನ್‌ ಮನೋಜ್‌ಕುಮಾರ್‌ ಪಾಂಡೆ ಮತ್ತು ಕ್ಯಾಪ್ಟನ್‌ ವಿಕ್ರಮ್‌ ಭಾತ್ರಾ ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments