Saturday, May 28, 2022
Powertv Logo
Homeಕ್ರೀಡೆಟಿ20 ವಿಶ್ವಕಪ್​ ಸೆಮಿಫೈನಲ್ ಪ್ರವೇಶಿಸಿದ ವನಿತಾ ಭಾರತ ತಂಡ

ಟಿ20 ವಿಶ್ವಕಪ್​ ಸೆಮಿಫೈನಲ್ ಪ್ರವೇಶಿಸಿದ ವನಿತಾ ಭಾರತ ತಂಡ

ಮೆಲ್ಬರ್ನ್​: ಐಸಿಸಿ ಮಹಿಳಾ ಟಿ20 ವಿಶ್ವಕಪ್​​ ಟೂರ್ನಿಯ ಅಂತಿಮ ಲೀಗ್​​ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 7 ವಿಕೆಟ್​ಗಳ ಜಯ ಗಳಿಸಿ, ಅಜೇಯವಾಗಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ಭಾರತದ ಕರಾರುವಕ್​ ಬೌಲಿಂಗ್​ ಧಾಳಿಗೆ ತತ್ತರಿಸಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 113 ರನ್​ ಗಳಿಸಿತು. 33 ರನ್​ ಗಳಿಸಿದ ಚಾಮರಿ ಅಟಪಟ್ಟು ಶ್ರೀಲಂಕಾದ ಪರ ಗರಿಷ್ಟ ಸ್ಕೋರರ್ ಎನಿಸಿಕೊಂಡರು.

ಇನ್ನು ಶ್ರೀಲಂಕಾ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಭಾರತ ತಂಡ ಶೆಫಾಲಿ ಶರ್ಮ(47) ಅವರ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಕೇವಲ 14.4 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments