ಬೆಂಗಳೂರು: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 329 ರನ್ಗಳಿಗೆ ಅಂತ್ಯವಾಗಿದೆ. ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್ಗಳಿಸಿದ್ದ ಟೀಂ ಇಂಡಿಯಾ ಇಂದು 29 ರನ್ ಸೇರಿಸುವಷ್ಟರಲ್ಲಿ ಉಳಿದ 4 ವಿಕೆಟ್ ಕಳೆದುಕೊಳ್ತು. ಒಂದು ಕಡೆ ವಿಕೆಟ್ ಕೀಪರ್ ರಿಷಬ್ ಪಂತ್ ಏಕಾಂಗಿಯಾಗಿ ಹೋರಾಟ ಮಾಡಿ ಅರ್ಧಶತಕಗಳಿಸಿದ್ರು. ಇನ್ನೊಂದು ತುದಿಯಲ್ಲಿ ಪಂತ್ಗೆ ಬೆಂಬಲ ಸಿಗದ ಪರಿಣಾಮ ಭಾರತ 239 ರನ್ಗೆ ಎಲ್ಲಾ ವಿಕೆಟ್ ಕಳೆದುಕೊಳ್ತು. ಭಾರತದ ಪರ ರೋಹಿತ್ ಶಮಾ 161, ರಹಾನೆ 67, ಪಂತ್ 58 ರನ್ ಕಾಣಿಕೆ ನೀಡಿದ್ರು, ಇಂಗ್ಲೆಂಡ್ ಪರ ಸ್ಪಿನ್ನರ್ ಮೋಹಿನ್ ಅಲಿ 4, ಓಲಿ ಸ್ಟೋನ್ 3, ಜ್ಯಾಕ್ ಲೀಚ್ ಎರಡು ವಿಕೆಟ್ ಪಡೆದುಕೊಂಡ್ರು.
ಬಳಿಕ ಆಟ ಆರಂಭಿಸಿದ ಇಂಗ್ಲೆಂಡ್ಗೆ ಇಶಾಂತ್ ಶರ್ಮಾ ಮೊದಲ ಓವರ್ನಲ್ಲೇ ಶಾಕ್ ನೀಡಿದ್ರು..ರೋನಿ ಬರ್ನ್ಸ್ ಶೂನ್ಯಕ್ಕೆ ನಿರ್ಗಮಿಸಿದ್ರೆ, ಡೊಮಿನಿಕ್ ಸಿಬ್ಲಿಗೆ ಸ್ಪಿನ್ನರ್ ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದ್ರು.. ಇತ್ತೀಚಿನ ವರದಿಗಳ ಬಂದಾಗ ಇಂಗ್ಲೆಂಡ್ ತಂಡ 20 ರನ್ಗೆ ಎರಡು ವಿಕೆಟ್ ಕಳೆದುಕೊಂಡಿದೆ.