ಭಾರತದ ಪೈಲಟ್​ ನಾಪತ್ತೆ – ವಾಯುಪಡೆಯಿಂದ ಅಧಿಕೃತ ಮಾಹಿತಿ

0
244

ನವದೆಹಲಿ: ಭಾರತೀಯ ವಾಯುಸೇನೆಯ ಪೈಲಟ್ ನಾಪತ್ತೆಯಾಗಿರುವುದನ್ನು ವಿದೇಶಾಂಗ ಇಲಾಖೆ ದೃಢಪಡಿಸಿದೆ. ಈ ಬಗ್ಗೆ ವಾಯಪಡೆಯ ವೈಸ್ ಮಾರ್ಷಲ್ ರವೀಶ್ ಕುಮಾರ್ ಅವರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಪೈಲಟ್ ಕಾಣೆಯಾಗಿರುವ ಬಗ್ಗೆ ಮಾತನಾಡಿದ ರವೀಶ್ ಅವರು, “ಗಡಿ ನಿಯಂತ್ರಣ ರೇಖೆಯಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆ ದಾಳಿ ನಡೆಸಿರುವುದಕ್ಕೆ ಪಾಕಿಸ್ತಾನ ಇಂದು ಬೆಳಗ್ಗೆ ಪ್ರತಿದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಿಮಾನವನ್ನು ಭಾರತದ ಮಿಗ್ 21 ವಿಮಾನ ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯಲ್ಲಿ ನಮಗೆ ಮಿಗ್ 21ನ್ನು ನಾವು ಕಳೆದುಕೊಂಡಿದ್ದು, ಪೈಲಟ್ ಒಬ್ಬರು ನಾಪತ್ತೆಯಾಗಿದ್ದಾರೆ” ಅಂತ ಹೇಳಿದ್ದಾರೆ.

ಈ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದರೆ ಈಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು, “ಭಾರತದ ಮಿಗ್ 21 ವಿಮಾನವನ್ನು ಹೊಡೆದುರುಳಿಸಿದ್ದೇವೆ. ಭಾರತದ ಪೈಲಟ್ಗಳು ನಮ್ಮ ಬಳಿ ಇದ್ದಾರೆ” ಅಂತ ಅಧಿಕೃತ ಮಾಹಿತಿ ನೀಡಿದ್ದಾರೆ.

ರಾಜತಾಂತ್ರಿಕ ಮಾರ್ಗದಲ್ಲಿ ಪೈಲಟ್​ನ್ನು ಕರೆತರಲು ಪ್ರಯತ್ನ ಮಾಡುವ ಸಾಧ್ಯತೆ ಇದ್ದು ಭಾರತ ಪಾಕಿಸ್ತಾನದ ಮೇಲೆ ಒತ್ತಡ ಹೇರಲಿದೆ. ಹಾಗೆಯೇ ಪೈಲಟ್​ ಕರೆತರಲು ವಿಶ್ವಸಂಸ್ಥೆ ನೆರವು ಪಡೆಯುವ ಕುರಿತೂ ಚಿಂತಿಸಲಾಗಿದೆ.

LEAVE A REPLY

Please enter your comment!
Please enter your name here