Sunday, May 29, 2022
Powertv Logo
Homeವಿದೇಶಸಚಿನ್, ಗಂಗೂಲಿ, ದ್ರಾವಿಡ್​ ಸಾಲಿಗೆ ಸೇರಿದ ರೋಹಿತ್ ಶರ್ಮಾ..!

ಸಚಿನ್, ಗಂಗೂಲಿ, ದ್ರಾವಿಡ್​ ಸಾಲಿಗೆ ಸೇರಿದ ರೋಹಿತ್ ಶರ್ಮಾ..!

ಮೌಂಟ್​​ ಮಾಂಗ್ನುಯಿ : ಹಿಟ್​​ಮ್ಯಾನ್​ ರೋಹಿತ್ ಶರ್ಮಾ ಮಾಸ್ಟರ್​ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್, ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಹಾಗೂ ಬಂಗಾಳದ ಹುಲಿ ಸೌರವ್​ ಗಂಗೂಲಿ ಅವರ ಸಾಲಿಗೆ ಸೇರಿದ್ದಾರೆ. ಅಲ್ಲದೆ ಸಮಕಾಲೀನ ಕ್ರಿಕೆಟಿಗರಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಎಲೈಟ್ ಪಟ್ಟಿಗೆ ಶರ್ಮಾ ಸೇರ್ಪಡೆಯಾಗಿದ್ದಾರೆ.
ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20ಯಲ್ಲಿ ಭರ್ಜರಿ ಅರ್ಧಶತಕ (ಅ.60/ ಗಾಯ) ಸಿಡಿಸಿದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 14,000ರನ್​​ ಮೈಲುಗಲ್ಲು ದಾಟಿದರು. ಭಾರತದ ಪರ ಇಂಟರ್ನ್ಯಾಷನಲ್ ಕ್ರಿಕೆಟಲ್ಲಿ 14,000ಕ್ಕೂ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್ ಹಾಗೂ ಹಾಲಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಈ ಪಟ್ಟಿಗೆ ಸೇರಲು ರೋಹಿತ್​​ಗೆ 31ರನ್ ಅಗತ್ಯವಿತ್ತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ ಶರ್ಮಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಭರ್ಜರಿ ಪ್ರದರ್ಶನ ನೀಡಿದರು. ಅವರಿಂದ ಮತ್ತಷ್ಟೂ ರನ್​ ಪ್ರಹಾರ ಹರಿಯುವ ಸಾಧ್ಯತೆ ಇತ್ತು. ಆದರೆ, ದುರಾದೃಷ್ಟವಶಾತ್ ಗಾಯಗೊಂಡು ಪೆವಿಲಿಯನ್ ಸೇರಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments