ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ವಿವ್ ಸ್ಮಿತ್ ಸಮಕಾಲೀನ ಸ್ಟಾರ್ ಕ್ರಿಕೆಟಿಗರು. ಇವರಿಬ್ರ ನಡುವೆ ದಾಖಲೆಗಳನ್ನು ಮಾಡೋ ವಿಚಾರದಲ್ಲಿ ಸಿಕ್ಕಾಪಟ್ಟೆ ಪೈಪೋಟಿ ಇದೆ. ಇಬ್ರೂ ರನ್ಮಷಿನ್ಗಳು. ಕೊಹ್ಲಿಗೆ ಸರಿಸಾಟಿಯಾದ ಆಟಗಾರ ಸ್ಮಿತ್… ಸ್ಮಿತ್ಗೆ ಕೊಹ್ಲಿ ಸರಿಸಾಟಿ ಅಂತ ಹೇಳಲಾಗ್ತಿದೆ. ಆದರೆ, ಸ್ಮಿತ್ ಆ ಮಾತಿಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ..!
“ಕೊಹ್ಲಿಗೆ ಸರಿಸಾಟಿ ಯಾರೂ ಇಲ್ಲ. ಅವರು ಈಗಾಗ್ಲೇ ಬಹಳಷ್ಟು ದಾಖಲೆಗಳನ್ನು ಮುರಿದಿದ್ದಾರೆ. ಇನ್ಮುಂದೆ ಇನ್ನಷ್ಟು ದಾಖಲೆಗಳನ್ನು ಬ್ರೇಕ್ ಮಾಡೋದನ್ನು ಎದುರು ನೋಡ್ತಿದ್ದೇನೆ. ಕ್ಯಾಪ್ಟನ್ ಆಗಿ ಕೊಹ್ಲಿ ಟೆಸ್ಟ್ನಲ್ಲಿ ಭಾರತವನ್ನು ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಅವರು ಭಾರತ ಕ್ರಿಕೆಟನ್ನು ಉತ್ತಮ ಸ್ಥಾನಕ್ಕೆ ತಂದಿದ್ದಾರೆ. ಮುಂದೆ ಕೂಡ ಉತ್ತಮವಾಗಿ ಮುನ್ನಡೆಸ್ತಾರೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ಭಾರತದ ವಿರುದ್ಧ ಇತ್ತೀಚೆಗೆ ನಡೆದ 3 ಮ್ಯಾಚ್ಗಳ ಏಕದಿನ ಸರಣಿಯಲ್ಲಿ ಆಸೀಸ್ 1-2 ಅಂತರದಿಂದ ಸೋಲನುಭವಿಸಿದೆ. ಈ ನಡುವೆ ಸ್ಮಿತ್ ಕೊಹ್ಲಿಯನ್ನು ಹಾಡಿಹೊಗಳಿದ್ದು ಕ್ರಿಕೆಟಿಂದಾಚೆಗಿನ ಅವರ ಸ್ನೇಹವನ್ನು ಹಾಗೂ ಕ್ರೀಡಾ ಸ್ಫೂರ್ತಿಯನ್ನು ಸೂಚಿಸುತ್ತೆ.