ಶಿವಮೊಗ್ಗ: ಕಳೆದೆರೆಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ತುಂಗಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಡ್ಯಾಂ ನಿಂದ ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ತುಂಗಾ ನದಿ ಭರ್ತಿಯಾಗಿ ಹರಿಯುತ್ತಿದ್ದು, ಕೋರ್ಪಲಯ್ಯನ ಛತ್ರದ ಬಳಿಯ ಮಂಟಪ ಮುಳುಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಕೆ.ಎಸ್. ಈಶ್ವರಪ್ಪ, ಪತ್ನಿ ಮತ್ತು ಕುಟುಂಬ ಸಮೇತರಾಗಿ ಬಂದು ಇಂದು ಬಾಗಿನ ಸಲ್ಲಿಸಿದರು. ಸಂಪ್ರದಾಯದಂತೆ, ಪಾಲಿಕೆ ಸದಸ್ಯರು ಮತ್ತು ನಗರದ ಮುಖಂಡರ ಜೊತೆಗೂಡಿ, ಇಂದು ಈಶ್ವರಪ್ಪ ಬಾಗಿನ ಸಲ್ಲಿಸಿದ್ರು.
ಈ ವೇಳೆ ಮಾತನಾಡಿದ ಅವರು, ತುಂಗಾ ನದಿ ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವುದ ಸಂತಸ ತಂದಿದೆ. ರೈತರ ಮೊಗದಲ್ಲಿ ಹರ್ಷ ಕಾಣುತ್ತಿದ್ದೆವೆ. ಕಳೆದ ಬಾರೀ ನಿರೀಕ್ಷೆ ಮೀರಿ ನೆರೆ ಬಂದ ಹಿನ್ನೆಲೆಯಲ್ಲಿ, ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರಸ್ತೆ ದುರಸ್ತಿ ಸೇರಿದಂತೆ, ಇತರೇ, ಪರಿಹಾರಕ್ಕಾಗಿ ಸ್ಪಂಧಿಸಿ, 1500 ಕೋಟಿ ರೂ. ಬಿಡುಗಡೆ ಮಾಡಿದ್ದು, ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗಿತ್ತು. ಈ ಬಾರಿ ಯಾವುದೇ ತೊಂದರೆ ಇಲ್ಲದಂತೆ, ಮಳೆಯಾಗುತ್ತಿದ್ದು, ಯಾವುದೇ ತೊಂದರೆಯಾಗದಂತೆ, ತುಂಗೆಗೆ ಬಾಗಿನ ಅರ್ಪಿಸಿ, ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹೇಳಿದ್ರು.