ಬೆಂಗಳೂರು: ವಿವೇಕಾನಂದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣದ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಜಾಪ್ರಭುತ್ವದ ದೊಡ್ಡ ಶತ್ರು ಕುಟುಂಬ ರಾಜಕಾರಣ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಯುವ ಜನತೆ ಮುಂದಾಗಬೇಕು. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ ಪ್ರಜಾಪ್ರಭುತ್ವದ ನಿಜವಾದ ಶತೃಗಳು. ಕೆಲವು ಕುಟುಂಬಗಳು ತಮ್ಮ ವೈಯಕ್ತಕ ಲಾಭಕ್ಕಾಗಿ ರಾಜಕೀಯ ಮಾಡುತ್ತಿವೆ. ಕುಟುಂಬ ರಾಜಕಾರಣದಿಂದ ದೇಶದಲ್ಲಿ ಭ್ರಷ್ಟಾಚಾರ ಹೆ್ಚ್ಚಿದೆ. ಕುಟಂಬ ರಾಜಕಾರಣ ಮಾಡುವ ಕುಟುಂಬಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.