Tuesday, January 25, 2022
Powertv Logo
HomePower Economicsಆದಾಯ ತೆರಿಗೆ ರಿಟರ್ನ್​; ತೆರಿಗೆದಾರರಲ್ಲಿ ಗೊಂದಲ

ಆದಾಯ ತೆರಿಗೆ ರಿಟರ್ನ್​; ತೆರಿಗೆದಾರರಲ್ಲಿ ಗೊಂದಲ

2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್​ ಸಲ್ಲಿಸುವ ಕೊನೆ ದಿನ ಸಮೀಪಿಸುತ್ತಿದ್ದಂತೆಯೇ ಅಲ್ಲಿನ ಗೊಂದಲಗಳ ಬಗ್ಗೆ ಜನರು ದೂರುತ್ತಿದ್ದಾರೆ. ITR ಪೋರ್ಟಲ್​ನಲ್ಲಿಯ ತಾಂತ್ರಿಕ ಸಮಸ್ಯೆಗಳ ಕುರಿತು ಬಹಳಷ್ಟು ಜನರಿಗೆ ಭಾರಿ ಗೊಂದಲ ಕಾಡುತ್ತಿದೆ.

AY21-22 ಕ್ಕಾಗಿ ITR ಅನ್ನು ಸಲ್ಲಿಸಲು ಕೊನೆಯ ದಿನಾಂಕವು ಡಿಸೆಂಬರ್ 31 ಆಗಿದೆ. ಕೇಂದ್ರ ಸರ್ಕಾರವು ITR ಫೈಲಿಂಗ್​ನ ಅಂತಿಮ ದಿನಾಂಕವನ್ನು ಒಂದು ವರ್ಷದ ಹಿಂದೆ ಜುಲೈ 31ರಿಂದ ಡಿಸೆಂಬರ್ 31ಕ್ಕೆ ವಿಸ್ತರಿಸಿತ್ತು. ಆದರೆ ತೆರಿಗೆ ಸಲ್ಲಿಸುವ ಪೋರ್ಟರ್ ಪದೇ ಪದೇ ಸ್ಥಗಿತಗೊಳ್ಳುತ್ತಿದೆ ಎಂದು ತೆರಿಗೆದಾರರು ದೂರಿದ್ದಾರೆ. ಆದ್ದರಿಂದ ಗಡುವು  ದಿನಾಂಕವನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿದ್ದಾರೆ.

ಸೋಮವಾರದಂದು ಟ್ವಿಟರ್ ಇಂಡಿಯಾದಲ್ಲಿ ಟ್ರೆಂಡಿಂಗ್ ಒಂದು ಪ್ರಾರಂಭವಾಗಿ, ಅದರಲ್ಲಿ ಬಳಕೆದಾರರು ಗಡುವು ದಿನಾಂಕವನ್ನು ವಿಸ್ತರಿಸಲು ಸರ್ಕಾರವನ್ನು ಒತ್ತಾಯಿಸಿದರು.

ಡಿಸೆಂಬರ್ 31 ಸಾಫ್ಟ್​ವೇರ್ ಡೆವಲಪರ್ ಅಥವ ತೆರಿಗೆದಾರರಿಗೆ ವಿಸ್ತ್ರುತ ಗಡುವು ದಿನಾಂಕವಾಗಿದೆ. ಏಕೆಂದರೆ ತೆರಿಗೆದಾರರು ನಿಗದಿತ ಸಮಯಕ್ಕಿಂತ ಕಡಿಮೆ ಸಮಯವನ್ನು ಪಡೆದಿದ್ದಾರೆ. ಆದ್ದರಿಂದ ಸರ್ಕಾರ ಡೆವಲಪರ್​ಗೆ ಈ ಗಡುವು ವಿಧಿಸಲಿ ಆದರೆ ತೆರಿಗೆದಾರರಿಗಲ್ಲ ಎಂದು ಬಳಕೆದಾರರು ಆಗ್ರಹಪಡಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಸರ್ಕಾರವು CAಗಳು ತಮ್ಮ ಲೆಕ್ಕಪರಿಶೋಧನೆಯನ್ನು ಸಂಪೂರ್ಣ ಏಕಾಗ್ರತೆ ಮತ್ತು ಸಂಪೂರ್ಣ ಸಮಗ್ರತೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಕಾನೂನುಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಬೇಕು ಎಂದು ಹೇಳಿದೆ. ಅಲ್ಲದೆ ಇನ್ಫೋಸಿಸ್​ಗಳ ತಪ್ಪಿಗಾಗಿ ನಾವು ನಮ್ಮ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದೂ ಸಹ ಹೇಳಿದೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

- Advertisment -

Most Popular

Recent Comments