ರಾಮನಗರ : ಭಾರತದ ಅತಿದೊಡ್ಡ ಮನೋರಂಜನಾ ತಾಣವಾದ ವಂಡರ್ಲಾ ಅಮ್ಯೂಸ್ ಮೆಂಟ್ ನಾಳೆ ಡಿ.18 ರಿಂದ ಕಾರ್ಯಾರಂಭ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೋನಾ ಭೀತಿಯಿಂದ ಸ್ಥಗಿತಗೊಂಡಿದ್ದ ಪಾರ್ಕ್ ಮತ್ತೆ ಕಾರ್ಯಾಚರಣೆ ಪುನರಾರಂಭಿಸಲು ರಾಮನಗರ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದಿದೆ. ಕೊರೋನಾ ನಂತರದಲ್ಲಿ ಎರಡು ದಿನ ಪಾರ್ಕ್ ಕೊರೋನಾ ವಾರಿಯರ್ಸ್ ಗಷ್ಟೇ ಪ್ರವೇಶ ನೀಡಿತ್ತು. ಪಾರ್ಕ್ ಅನಿರೀಕ್ಷಿತ ಮುಚ್ಚುವಿಕೆಯಿಂದ ಗ್ರಾಹಕರು ಆನ್ ಲೈನ್ ನಲ್ಲಿ ಬುಕಿಂಗ್ ಮಾಡಿದ್ದರು. ಇದೀಗ ಸಂಪೂರ್ಣ ಮರುಪಾವತಿ ಅಥವಾ ಬುಕಿಂಗ್ ದಿನಾಂಕದಿಂದ ಒಂದು ತಿಂಗಳವರೆಗೆ ಟಿಕೆಟ್ನ ಸಿಂಧುತ್ವವನ್ನು ವಿಸ್ತರಿಸುವ ಆಯ್ಕೆಯನ್ನು ನೀಡಲಾಯಿತು. 95% ಮರುಪಾವತಿಯನ್ನು ಡಿ. 14 ರಂದು ಪ್ರಕ್ರಿಯೆಗೊಳಿಸಲಾಯಿತು. ಬ್ಯಾಂಕಿನಲ್ಲಿ ಸಮಸ್ಯೆಗಳಿಂದಾಗಿ ಕೆಲವು ಮರುಪಾವತಿಗಳು ಬಾಕಿ ಉಳಿದಿವೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ತಮ್ಮ ಟಿಕೆಟ್ಗಳಲ್ಲಿ 30 ದಿನಗಳ ವಿಸ್ತರಣೆಯನ್ನು ಕೋರಿದ ಅತಿಥಿಗಳು ಸಮಯದೊಳಗೆ ಪಾರ್ಕ್ ಪ್ರವೇಶವನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ.