Sunday, May 29, 2022
Powertv Logo
Homeದೇಶಮಾನವೀಯತೆ ಮೆರೆದು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿರ್ಧರಿಸಿದ ಭಾರತ

ಮಾನವೀಯತೆ ಮೆರೆದು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿರ್ಧರಿಸಿದ ಭಾರತ

ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಮೇಲೆ ಇದ್ದ ತಡೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡುವಂತೆ ಆಗ್ರಹಿಸಿ ಎಚ್ಚರಿಕೆ ನೀಡಿದ್ದರು. ಇದೀಗ ಭಾರತ ನೆರೆ ರಾಷ್ಟ್ರಗಳ ಮನವಿಗೆ ಮಣಿದು ಔಷಧಿಗಳ ಮೇಲೆ ಹೇರಿದ್ದ ನಿಷೇಧವನ್ನು ರದ್ದು ಮಾಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಔಷಧ ರಫ್ತಿಗೆ ನೀಡಿದ್ದ ತಡೆಯನ್ನು ರದ್ದು ಮಾಡಿದ್ದು, ಭಾರತ ನೆರೆ ರಾಷ್ಟ್ರಗಳ ನೆರವಿಗೆ ನಿಂತಿದೆ. ಅದಕ್ಕಾಗಿ ಪ್ಯಾರಾಸಿಟಮಾಲ್ ಹಾಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಸರಬರಾಜಿಗೆ ಅನುಮತಿ ನೀಡುತ್ತೇವೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ನಮ್ಮ ಅವಶ್ಯಕತೆ ಎಷ್ಟಿದೆಯೋ ಅದನ್ನು ಗಮನದಲ್ಲಿಟ್ಟುಕೊಂಡು  ಮಾತ್ರೆಗಳನ್ನು ಪೂರೈಸುತ್ತೇವೆಂದು ಸ್ಪಷ್ಟಪಡಿಸಿದ್ದಾರೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ. ಹಾಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್​ಗೆ ಡಿಮ್ಯಾಂಡ್​ ಕೂಡಾ ಹೆಚ್ಚಾಗಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments