ಬೆಂಗಳೂರು : ಕಳೆದ 6 ತಿಂಗಳಿಂದ ಮೆಟ್ರೋ ಸಂಚಾರ ಕೊರೋನಾ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಇದೀಗ ಅನ್ಲಾಕ್ 4.O ನಲ್ಲಿ ಮೆಟ್ರೋ ಸಂಚಾರ ಬಹುತೇಕ ಸೆಪ್ಟಂಬರ್ 1 ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಆರಂಭವಾದ ನಂತರದಲ್ಲಿಯೇ ಬೆಂಗಳೂರಿನಲ್ಲಿ ಸಂಚಾರ ಆರಂಭವಾಗಲಿದೆ.
ಮೆಟ್ರೋ ಸಂಚಾರ ಆರಂಭವಾದರೆ ಪ್ರಯಾಣಿಕರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತೆ. ಅಲ್ಲದೆ ಒಂದು ಬೋಗಿಯಲ್ಲಿ 50 ಜನರು ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡುಲಾಗುತ್ತದೆ. ಇನ್ನು ಮೆಟ್ರೋ ಚಾಲನೆ ಆರಂಭಿಸಲು ಅಗತ್ಯ ಸಿಬ್ಬಂದಿ ಪೂರೈಕೆಮಾಡಲಾಗಿದ್ದು, ಅವರಿಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ. ಹಾಗೆಯೇ ಬಹುಮುಖ್ಯವಾಗಿ ಮೆಟ್ರೋ ಕಾಯಿನ್ ಬದಲಾಗಿ ಮೆಟ್ರೋ ಕಾರ್ಡ್ ಬಳಕೆಗೆ ಚಿಂತನೆ ನಡೆಸಲಾಗುತ್ತಿದೆ.