ಬೆಂಗಳೂರು: ಲಂಡನ್ ನಿಂದ ಬಂದ ಪ್ರಯಾಣಿಕರು ನಾಪತ್ತೆ ಆಗಿರುವ ಹಿನ್ನಲೆ, ಒಂದೆರಡು ದಿನದಲ್ಲಿ ಅವರು ಕಂಡು ಹಿಡೆಯುತ್ತೇವೆ ಎಂದು ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಯುಕೆ ಇಂದ ಬಂದವರು ಎಲ್ಲರೂ ಟೆಸ್ಟ್ ಮಾಡಿಸಿಕ್ಕೊಳ್ಳಿ. ಅವರಾಗಿಯೇ ಟೆಸ್ಟ್ ಮಾಡಿಸಿಕೊಂಡರೆ ಸರಿ ಇರುತ್ತೆ. ಈಗಾಗಗಲೇ ಲಂಡನ್ ನಿಂದ ಬಂದ 14 ಮಂದಿಗೆ ಕೊರೋನಾ ರೂಪಾಂತರಗೊಂಡ ಹೊಸ ವೈರಸ್ ಬಂದಿದೆನಾ ಅಂತಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಲಂಡನ್ ನಿಂದ ಬಂದ ಕೆಲವರ ಪೋನ್ ಸ್ವೀಚ್ ಆಫ್ ಆಗಿದೆ. ನಾಳೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತದೆ. ಗೃಹ ಇಲಾಖೆಯಿಂದಲೂ ತಂಡ ರಚನೆ ಮಾಡಿದ್ದೇವೆ. ಪತ್ತೆ ಕಾರ್ಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದೇವೆ ಎಂದರು.