ದಾಳಿಯೇ ನಡೆದಿಲ್ಲ ಎಂದ ರಣಹೇಡಿ ರಾಷ್ಟ್ರದ ಪ್ರಧಾನಿ..!

0
231

ಇಸ್ಲಮಾಬಾದ್ : ಪಾಕಿಸ್ತಾನ ಒಂಥರಾ ಊಸರವಳ್ಳಿ. ಶಾಂತಿಗೆ ಅವಕಾಶ ಕೊಡಿ ಕೊಡಿ ಕೊಡಿ ಅಂತ ಕಾಲಿಗೆ ಬೀಳ್ತಾ.. ಕಾಲೆಳೆಯುವ ಕಂತ್ರಿ ಬುದ್ಧಿ ಅದರದ್ದು. ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಡೆಸಿದಾಗ ‘ನಮಗೂ ಅದಕ್ಕು ಸಂಬಂಧವಿಲ್ಲ. ತಿಳ್ಕೊಂಡು ಮಾತನಾಡಿ’ ಅಂತ ಪುಕ್ಕಟೆ ಉಪದೇಶ ನೀಡಿತ್ತು. ಆಮೇಲೆ ಜಾಗತಿಕಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು.
ಇದೀಗ ಮತ್ತೆ ತನ್ನ ಕಪಟ ಬುದ್ಧಿಯನ್ನು ಪ್ರದರ್ಶಿಸಿದೆ. ಭಾರತೀಯ ವಾಯುಸೇನೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿರೋದನ್ನು ಅಲ್ಲಗಳೆದಿದೆ. ‘ಪಾಪಿ’ಸ್ತಾನ ಎನ್ನುವ ಟೆರರಿಸ್ತಾನ್ ದೇಶದ ಪ್ರಧಾನಿ ಇಮ್ರಾನ್ ಖಾನ್ ಭಾರತ ನಡೆಸಿದ ದಾಳಿಯನ್ನು ತಿರಸ್ಕರಿಸಿದ್ದಾರೆ. ದಾಳಿಯೇ ನಡೆಸಿಲ್ಲ ಅಂತ ಸುಳ್ಳು ಹೇಳಿಕೆ ನೀಡಿದ್ದಾರೆ. ‘ಭಾರತ ದಾಳಿಯನ್ನು ಮಾಡೇ ಇಲ್ಲ’ ಅಂತ ಅವ್ರು ಹೇಳ್ಲೇ ಬೇಕು ಬಿಡಿ..! ಯಾಕಂದ್ರೆ, ಇವತ್ತು ಪಾಕ್​ ಸಂಸತ್ತಿನಲ್ಲಿ ಇರೋ ಬರೋ ಸಂಸದರೆಲ್ಲಾ ಥು.. ಛೀ..ಅಂತ ಅವರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ ನೋಡಿ. ಹಾಗಾಗಿ ತನ್ನ ಮಾನ ಮರ್ಯಾದಿ ಉಳಿಸಿಕೊಂಡು ತನ್ ದೇಶದಲ್ಲಿ ತಾನು ಹೀರೋ ಆಗೋಕೆ ಮಾಜಿ ಕ್ರಿಕೆಟರ್ ಕೂಡ ಆಗಿರೋ ಪ್ರಧಾನಿ ಇಮ್ರಾನ್​ ಖಾನ್ ಕಳ್ಳಾಟ ಆಡಿದ್ದಾರೆ.
ಇಮ್ರಾನ್​ ಖಾನ್ ಒಂದ್ ಕಡೆ ಭಾರತದ ದಾಳಿಯನ್ನು ಅಲ್ಲಗಳೆದಿದ್ರೆ ಇನ್ನೊಂದು ಕಡೆಯಿಂದ ಭಾರತದ ಮೇಲೆ ಪ್ರತಿದಾಳಿಗೆ ಸಿದ್ಧರಾಗಿ ಅಂತ ಹೇಳಿದ್ದಾರೆ. ಸದ್ದಿಲ್ಲದೆ ನುಗ್ಗಿ ಒಟ್ಟೊಟ್ಟಿಗೆ ಮೂರು ಉಗ್ರ ನೆಲೆಗಳನ್ನು ನೆಲಕಚ್ಚಿಸಿರೋ ಸೇನೆಗೆ ಪಾಕ್ ಯಾವ ಲೆಕ್ಕ..? ಈಗ ಕೊಟ್ಟಿರೋ ಶಾಕ್​ನಿಂದ ಮೊದ್ಲು ಆಚೆ ಬರೋಕೆ ಆಗುತ್ತಾ ಅಂತ ನೋಡ್ಕೊಳ್ಲಿ.

LEAVE A REPLY

Please enter your comment!
Please enter your name here