ಉಗ್ರರಿಗೆ ನೆರವು ನೀಡುವುದನ್ನು ತಕ್ಷಣ ನಿಲ್ಲಿಸಿ: ಪಾಕ್​ಗೆ ಅಮೆರಿಕ ಎಚ್ಚರಿಕೆ

0
410

ವಾಷಿಂಗ್ಟನ್​: ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರ ದಾಳಿಯನ್ನು ಅಮೆರಿಕ ಖಂಡಿಸಿದೆ. ಪಾಕಿಸ್ತಾನ ಉಗ್ರರ ಸ್ವರ್ಗವಾಗಿದ್ದು, ಉಗ್ರರಿಗೆ ಆಶ್ರಯ ನೀಡದಂತೆ ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡದಂತೆ ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಸಿದೆ.

“ಜನರಲ್ಲಿ ಭಯ ಹುಟ್ಟಿಸುವುದು, ಹಿಂಸಾಚಾರ, ಸಾವು ನೋವನ್ನು ಮಾತ್ರ ಬಯಸುವ ಉಗ್ರ ಸಂಘಟನೆಗಳೂ, ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಆಶ್ರಯ ನೀಡುವುದನ್ನು, ಎಲ್ಲ ಸಹಕಾರ ಮತ್ತು ಬೆಂಬಲ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು” ಅಂತ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸಾಂಡರ್ಸ್​ ಹೇಳಿದ್ದಾರೆ.

“ಈಗ ನಡೆದಿರುವ ಉಗ್ರ ದಾಳಿ ನಮ್ಮ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗೇ ಈ ವಿಚಾರವಾಗಿ ಅಮೆರಿಕ ಹಾಗೂ ಭಾರತದ ನಡುವಿನ ಸಹಕಾರ ಇನ್ನಷ್ಟು ಹೆಚ್ಚಾಗುತ್ತದೆ” ಅಂತ ಹೇಳಿದ್ದಾರೆ. ಪಾಕಿಸ್ತಾನ ಮೂಲದ ಜೈಶ್​-ಇ-ಮಹಮ್ಮದ್​(ಜೆಇಎಂ) ಉಗ್ರ ಸಂಘಟನೆಯು ದಾಳಿ ಹೊಣೆಯನ್ನು ಹೊತ್ತುಕೊಂಡಿದೆ.

LEAVE A REPLY

Please enter your comment!
Please enter your name here