ಕಾರ್ಕಳದಲ್ಲಿ ಅಕ್ರಮ ಹಣ ವಶಕ್ಕೆ

0
327

ಉಡುಪಿ: ಲೋಕಸಭಾ ಚುನಾವಣೆ ಡೇಟ್​ ಫಿಕ್ಸ್​ ಆಗಿರೋ ಬೆನ್ನಲ್ಲೇ ದಾಖಲೆಗಳಿಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ತಾಲೂಕು ವ್ಯಾಪ್ತಿಯ ಮಾಳ ಚೆಕ್ ಪೋಸ್ಟ್​​ನಲ್ಲಿ ನಗದು ವಶಪಡಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಮಾಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದರು. ತಪಾಸಣೆ ವೇಳೆ ಜೀಪಿನಲ್ಲಿ ದಾಖಲೆ ಇಲ್ಲದ 1,50,000 ರೂ. ನಗದು ಪತ್ತೆಯಾಗಿದೆ. ವಶಪಡಿಸಲಾಗಿರುವ ಹಣ ಬಾಲಕೃಷ್ಣ ಮತ್ತು ಸೈಯದ್ ಮುಹಿನುಲ್ಲಾ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಕಾರ್ಕಳ ಪೊಲೀಸರು ತಹಶೀಲ್ದಾರ್ ಅವರಿಗೆ ಹಣ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here