ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ರಮ ಗೋ ಸಾಗಾಟದ ಬಹು ದೊಡ್ಡ ಜಾಲ ಪತ್ತೆಯಾಗಿದೆ. ಇಂದು ಮುಂಜಾನೆಯೇ ಈ ಒಂದು ಜಾಲ ಪತ್ತೆಯಾಗಿದ್ದು, ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಎರಡು ಕಂಟೈನರ್ ಲಾರಿಗಳ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ, ಗೋವುಗಳನ್ನು ರಕ್ಷಿಸಿದ್ದಾರೆ. ಕಂಟೈನರ್ ನಲ್ಲಿ, ಸುಮಾರು 50 ಗೋವುಗಳಿದ್ದವು ಎಂದು ಹೇಳಲಾಗುತ್ತಿದ್ದು, ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ನೆಮ್ಮಾರು ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.
ಇಂದು ಬೆಳಗಿನ ಜಾವ ಸುಮಾರು 3 ವರೆ ವೇಳೆಗೆ ಈ ಒಂದು ದಾಳಿ ನಡೆಸಿದ್ದು, ತೀರ್ಥಹಳ್ಳಿ, ಕೊಪ್ಪ ಹಾಗೂ ಶೃಂಗೇರಿ ಭಾಗದ ಬಜರಂಗದಳ ಕಾರ್ಯಕರ್ತರ ಕಾರ್ಯಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ದಾವಣಗೆರೆ ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಈ ಗೋವುಗಳನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.