ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗಾಂಜಾ ಮತ್ತು ಶ್ರೀಗಂಧವನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಂತಾಮಣಿ ನಗರದ ಕೀರ್ತಿ ಬಡಾವಣೆಯ ಶಬಾನ ಎಂಬುವರ ಮನೆಯಲ್ಲಿ ಅಕ್ರಮ ಗಾಂಜಾ ಮತ್ತು ಶ್ರೀಗಂಧವನ್ನ ದಾಸ್ತಾನು ಮಾಡಿರುವ ಕುರಿತು ಖಚಿತ ಮಾಹಿತಿ ಪಡೆದ ಚಿಂತಾಮಣಿ ನಗರ ಪೊಲೀಸರು ಸಿಪಿಐ ಆನಂದ್ ಕುಮಾರ್ ಹಾಗೂ ಪಿಎಸ್ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ 3.8kg ಅಕ್ರಮ ಗಾಂಜಾ ಹಾಗೂ 43kg ಅಕ್ರಮ ಶ್ರೀಗಂಧವನ್ನ ಜಫ್ತಿ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ಶಬಾನಾ, ವಜೀರ್ ಖಾನ್, ಶಬಾಜ್ ಖಾನ್ ರನ್ನ ಬಂಧಿಸಿದ್ದು, ಪ್ರಮುಖ ಆರೋಪಿ ಅರ್ಬಾಜ್ ಖಾನ್ ಪರಾರಿಯಾಗಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ಶಬಾನ ಮತ್ತು ಅರ್ಬಾಜ್ ಖಾನ್ ರ ಮೇಲೆ ಈಗಾಗಲೇ ಚಿಂತಾಮಣಿ ತಾಲ್ಲೂಕಿನಲ್ಲಿ 5 ಹಾಗೂ ಅರಣ್ಯ ಇಲಾಖೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
– ಮಲ್ಲಪ್ಪ. ಎಂ.ಶ್ರೀರಾಮ್