ಕೊಪ್ಪಳ: ದೀಪಾವಳಿ ಮುಗಿದರೂ ಇನ್ನೂ ಇಸ್ಪೀಟ್ಗೆ ಬ್ರೇಕ್ ಬಿದ್ದಿಲ್ಲ. ಹೌದು ಕೊಪ್ಪಳ ಜಿಲ್ಲೆ ಕನಕಗಿರಿಯ ಬಿರ್ಲಾ ರೆಸಾರ್ಟ್ನಲ್ಲಿ ಎಗ್ಗಿಲ್ಲದೆ ಅಂದರ್-ಬಾಹರ್ ಆಟ ಆಡ್ತಾನೆ ಇದ್ದಾರೆ.
ಹೊರಗಡೆ ನೋಡುವುದಕ್ಕೆ ಮಾತ್ರ ರೆಸಾರ್ಟ್ ಆದ್ರೆ ಒಳಗಡೆ ರೆಸಾರ್ಟ್ ಹೆಸರಲ್ಲಿ ಒಳಗಡೆ ಎಕ್ಕ ರಾಜಾ ರಾಣಿ ಆಟ ಎಗ್ಗಿಲ್ಲದೆ ನಡೆಯುತ್ತದೆ. 3000 ಎಂಟ್ರಿ ಫೀಸ್ ಕೊಟ್ರೆ ಮಾತ್ರ ಇಲ್ಲಿ ಇಸ್ಪೀಟ್ ಆಡಲು ಅವಕಾಶ ಅಲ್ಲದೆ ಒಳಗಡೆ ಎಂಟ್ರಿ ಕೊಟ್ಟ ಕೂಡಲೇ ಖುಲ್ಲಾಂ ಖುಲ್ಲ ಅಂದರ್ ಬಾಹರ್ ನಡೆಯುತ್ತದೆ. ಒಂದು ದಿನಕ್ಕೆ ಎರಡರಿಂದ ಮೂರು ಕೋಟಿ ರೂಪಾಯಿ ಹಣದ ವಹಿವಾಟು ಇಲ್ಲಿ ನಡೆಯುತ್ತದೆ.
ಇಲ್ಲಿಗೆ ಇಸ್ಪೀಟ್ ಆಡಲು ಬೆಂಗಳೂರು, ಹುಬ್ಬಳ್ಳಿ, ಗದಗ್ನಿಂದಲೂ ಬರುವುದಲ್ಲದೇ, ಜೂಜುಕೋರರು ಕೋಟಿ ಕೋಟಿ ಹಣವನ್ನು ತಂದು ಅಂದರ್-ಬಾಹರ್ ಆಟದಲ್ಲಿ ಹಾಕ್ತಾರೆ. ಇನ್ನೂ ಇದರ ಹಿಂದೆ ಸ್ಥಳೀಯ ಬಿಜೆಪಿ ಶಾಸಕ ಬಸವರಾಜ ದಡೆಸೂಗೂರು ಬೆಂಬಲಿಗರಿದ್ದಾರೆ ಎಂಬ ಮಾತು ಕೂಡಾ ಕೇಳಿ ಬರ್ತಿದ್ದು, ನಿತ್ಯ ಆಟ ಕೂಗಳತೆ ದೂರದಲ್ಲಿ ನಡೀತಾ ಇದ್ದರೂ ಪೊಲೀಸ್ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ.