Home ಕ್ರೀಡೆ P.Cricket ಧೋನಿ ಇದ್ರೆ ಎಬಿಡಿ ಕಮ್​​​​​​ಬ್ಯಾಕ್​ ಮಾಡ್ತಾರಂತೆ..!

ಧೋನಿ ಇದ್ರೆ ಎಬಿಡಿ ಕಮ್​​​​​​ಬ್ಯಾಕ್​ ಮಾಡ್ತಾರಂತೆ..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​​ ಧೋನಿ ಇದ್ದರೆ ತಾನು 2023ರ ವರ್ಲ್ಡ್​ಕಪ್​ಗೆ ಕಮ್​ಬ್ಯಾಕ್​ ಮಾಡ್ತೀನಿ ಅಂತ ಸೌತ್ಆಫ್ರಿಕಾದ ಎಬಿ ಡಿವಿಲಿಯರ್ಸ್​​​​ ಹೇಳಿದ್ದಾರೆ.
ಈಗಾಗಲೇ ನಿವೃತ್ತಿ ಘೋಷಿಸಿರೋ ಎಬಿಡಿ, ”2019ರ ವಿಶ್ವಕಪ್​​​ ಆಡೋ ಆಸೆ ಇತ್ತು. 2023ರ ವರ್ಲ್ಡ್​ಕಪ್​ಗೆ ಬೇಕಾದ್ರೆ ವಾಪಸ್​ ಆಗ್ತೀನಿ. ಆದ್ರೆ, ಧೋನಿ ಕೂಡ ಇರ್ಬೇಕು” ಅಂದಿದ್ದಾರೆ.
ಸಂದರ್ಶನವೊಂದ್ರಲ್ಲಿ ಮಾತನಾಡಿದ ಅವರು, ”ನಿವೃತ್ತಿ ಆಗುವಾಗ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ. ಅದು ಬಹಳ ಕಷ್ಟ ಅನಿಸಿಬಿಟ್ಟಿತ್ತು. ಆದ್ರೆ ಈ ವಯಸ್ಸಲ್ಲೂ ಧೋನಿ ಆಟ ಉತ್ತಮವಾಗಿದೆ. ಧೋನಿ 2023ರವರೆಗೆ ಇದ್ರೆ ನಾನು ಕೂಡ ಆ ವಿಶ್ವಕಪ್​ಗೆ ಕಮ್​ಬ್ಯಾಕ್​ ಆಗ್ತೀನಿ” ಎಂದು ಹೇಳಿಕೊಂಡಿದ್ದಾರೆ.
ಇನ್ನು ದ.ಆಫ್ರಿಕಾ ಪರ 114 ಟೆಸ್ಟ್​​​ ಮ್ಯಾಚ್​ಗಳನ್ನು ಆಡಿರೋ ಎಬಿಡಿ 22 ಸೆಂಚುರಿ, 46 ಹಾಫ್​ಸೆಂಚುರಿ ಸಹಿತ 8,765ರನ್​ ಬಾರಿಸಿದ್ದಾರೆ. 228 ಒನ್​​ ಡೇ ಇಂಟರ್​ನ್ಯಾಷನಲ್​ ಮ್ಯಾಚ್​ಗಳಿಂದ 9,577ರನ್​ ಗಳಿಸಿದ್ದಾರೆ. ಅದರಲ್ಲಿ 25 ಸೆಂಚುರಿ, 53 ಹಾಫ್​ ಸೆಂಚುರಿ ಒಳಗೊಂಡಿದೆ. 78 ಟಿ20 ಮ್ಯಾಚ್​ಗಳಿಂದ ಒಟ್ಟು 1,672ರನ್​ಗಳನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments