Home ದೇಶ-ವಿದೇಶ ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ COVID -19 ಟೆಸ್ಟ್ ಕಿಟ್ ಆವಿಷ್ಕರಿಸಿದ ದೆಹಲಿ ಐಐಟಿ ವಿದ್ಯಾರ್ಥಿಗಳು...

ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ COVID -19 ಟೆಸ್ಟ್ ಕಿಟ್ ಆವಿಷ್ಕರಿಸಿದ ದೆಹಲಿ ಐಐಟಿ ವಿದ್ಯಾರ್ಥಿಗಳು ..!

ಕೊರೋನಾ ಸೋಂಕು ದಿನೇ ದಿನೇ ವ್ಯಾಪಿಸುತ್ತಿದೆ. ಇಡೀ ವಿಶ್ವದಾದ್ಯಂತ  ಈ ಹೆಮ್ಮಾರಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತಿವೆ.  ಇದೀಗ ನವದೆಹಲಿಯ ಭಾರತೀಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  (ಐಐಟಿ) ವಿದ್ಯಾರ್ಥಿಗಳು ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಕೋವಿಡ್ -19 ಟೆಸ್ಟ್ ಕಿಟ್ ಆವಿಷ್ಕರಿಸಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್​ಆರ್​ಡಿ) ಕೇಂದ್ರ ಸಚಿವ ರಮೇಶ್​​​ ಪೋಖ್ರಿಯಾಲ್​​​​ ನಿಶಾಂಕ್​​​ ಹಾಗೂ ಎಚ್​​ಆರ್​ಡಿ ರಾಜ್ಯ ಸಚಿವ ಸಂಜಯ್ ಧೋತ್ರೆ ಐಐಟಿ ಆವಿಷ್ಕರಿಸಿರುವ ಕಡಿಮೆ ಬೆಲೆಯ, ಕೊರೊಶೂರ್ಎಂಬ ಹೆಸರಿನ ಕೋವಿಡ್ -19 ಪರೀಕ್ಷೆಯ ಕಿಟ್ ಬಿಡುಗಡೆ ಮಾಡಿದ್ದಾರೆ.

ಪಿಸಿಆರ್ ಆಧಾರಿತ ಕೋವಿಡ್ -19 ಡಯಾಗ್ನೋಸ್ಟಿಕ್​ ಕಿಟ್​ ಕೊರೊಶೂರ್ ಅನ್ನೋ ಪರೀಕ್ಷೆ ಇದಾಗಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಇದರ ಸೌಲಭ್ಯ ಸಿಗುತ್ತೆ. ಕೇವಲ ಮೂರು ಗಂಟೆಗಳಲ್ಲಿ ಫಲಿತಾಂಶ ಸಿಗುತ್ತದೆ ಎಂದು ತಿಳಿದುಬಂದಿದೆ.

“ ಇದೊಂದು ಐತಿಹಾಸಿಕ ಸಂದರ್ಭವಾಗಿದ್ದು, ರೋಗ ನಿರ್ಣಯದ ಕಿಟ್ ಅಭಿವೃದ್ಧಿಪಡಿಸಿದ್ದಕ್ಕೆ ಐಐಟಿಗೆ ಧನ್ಯವಾದಗಳು’’ ಅಂತ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

ಹುಣಸೋಡು ಬ್ಲ್ಯಾಸ್ಟ್ ಪ್ರಕರಣ-ಮೃತಪಟ್ಟ ಐದು ಮಂದಿಯ ಗುರುತು ಪತ್ತೆ

ಶಿವಮೊಗ್ಗ: ಹುಣಸೋಡಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ  6  ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5  ಜನರ ಮೃತ ದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ರಾಯದುರ್ಗದ ಪವನ್ ಕುಮಾರ್ (29) ಜಾವೀದ್...

ಪರೀಕ್ಷೆ ಬೇಡ ಅಂತ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಿಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ, ಇದನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್​ನಲ್ಲಿ  ಎನ್​​​ಎಸ್​​ಯುಐ ಸಂಘಟನೆ ಪ್ರತಿಭಟನೆ ನಡೆಸಿತು. ರಾಜ್ಯ...

ಸಚಿವ ಶಾಸಕರುಗಳ ಗುಪ್ತ ಗುಪ್ತ ಸಭೆ

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಖಾತೆ ಹಂಚಿಕೆ ಅಸಮಾಧಾನದ ಬೇಗುದಿ ಮಧ್ಯೆ ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದಂತೆ ಇದೆ ಪಕ್ಷದೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಸಚಿವ ಸ್ಥಾನ ಸಿಗದವರದ್ದು...

ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

ಕಾರವಾರ : ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ಅಂತ್ಯ ಸಂಸ್ಕಾರವನ್ನು ಮಗಳೇ ನೆರವೇರಿಸಿದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆಯಲ್ಲಿ ನಡೆದಿದೆ.ಕುರ್ನಿಪೇಟೆಯ ಚಂದ್ರಕಾಂತ ಬುದೊ ಪಾಗಿ (56) ಹೃದಯಾಘಾತದಿಂದ ಮೃತಪಟ್ಟಿದ್ದರು. 9...

Recent Comments