Tuesday, January 25, 2022
Powertv Logo
HomePower Economicsಇನ್ನುಮುಂದೆ ಎಟಿಎಂನಿಂದ ದುಡ್ಡು ತೆಗೆದರೆ ಜೇಬಿಗೆ ಬೀಳುತ್ತೆ ಕತ್ತರಿ!

ಇನ್ನುಮುಂದೆ ಎಟಿಎಂನಿಂದ ದುಡ್ಡು ತೆಗೆದರೆ ಜೇಬಿಗೆ ಬೀಳುತ್ತೆ ಕತ್ತರಿ!

ನವದೆಹಲಿ: ಹೊಸ ವರ್ಷಕ್ಕೆ ಎಂಟ್ರಿ ಕೊಡಲು ಇನ್ನು ಕೆಲವೇ ದಿನಗಳು ಇದೆ. ಈ ನಡುವೆ ಮುಂದಿನ ವರ್ಷ ಹಲವು ಬದಲಾವಣೆಗಳು ಬ್ಯಾಂಕಿಂಗ್ ವಲಯದಲ್ಲಿ ಆಗುತ್ತಿವೆ. ಅದರ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೌದು,  ಮುಂದಿನ ವರ್ಷದಿಂದ ದೇಶದಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ. ಪ್ರಮುಖವಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ನಲ್ಲಿ ಬದಲಾವಣೆ ಆಗಲಿದೆ. ಇದರ ಜೊತೆಗೆ  ಎಟಿಎಂನಿಂದ ಹಣವನ್ನು ತೆಗೆಯುವುದು ನಿಮಗೆ ದುಬಾರಿಯಾಗಲಿದೆ.

ಮುಂದಿನ ತಿಂಗಳಿನಿಂದ ಬ್ಯಾಂಕುಗಳು ಹೆಚ್ಚಿನ ATM withdrawal ಶುಲ್ಕವನ್ನು ವಿಧಿಸಲಿದ್ದು, ಜನವರಿ 1 ರಿಂದ ನಿರ್ದಿಷ್ಟ ಮಿತಿಯನ್ನು ಮೀರಿ ATM withdrawal ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ. ಮುಂದಿನ ವರ್ಷದಿಂದ ಉಚಿತ ಮಾಸಿಕ ಅನುಮತಿಸುವ ಮಿತಿಯನ್ನು ಮೀರಿ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಜೂನ್​ನಲ್ಲಿ ಬ್ಯಾಂಕ್​ಗಳಿಗೆ ಅನುಮತಿ ನೀಡಿತ್ತು.

ಹೊಸ ಮಾರ್ಗಸೂಚಿಯ ಪ್ರಕಾರ, ಇನ್ನು ಮುಂದೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರು ತಮ್ಮ ಹೆಚ್ಚಿನ ಎಟಿಎಂ ವಹಿವಾಟಿಗೆ 21 ರೂಪಾಯಿ ಪಾವತಿ ಮಾಡಬೇಕು. ಈವರೆಗೆ ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಗ್ರಾಹಕರು ರೂಪಾಯಿ 20 ಶುಲ್ಕವು ಪಾವತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಉಚಿತ ವಹಿವಾಟಿನ ಮಿತಿಯನ್ನು ಮೀರಿದರೆ 21 ರೂಪಾಯಿ ಜೊತೆಗೆ ಜಿಎಸ್​ಟಿಯನ್ನು ಪಾವತಿ ಮಾಡಬೇಕಾಗುತ್ತದೆ.

ಡೆಬಿಟ್ ಕಾರ್ಡನ್ನು ಬಳಕೆ ಮಾಡುವ ಗ್ರಾಹಕರು ತಮ್ಮದೇ ಬ್ಯಾಂಕಿನ ಎಟಿಎಂನಿಂದ ತಿಂಗಳಿಗೆ ಐದು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು. ಹಾಗೆಯೇ ಬೇರೆ ಬ್ಯಾಂಕುಗಳ ಎಟಿಎಂನಲ್ಲಿ ಮೆಟ್ರೋ ನಗರದಲ್ಲಿ ಮೂರು ಬಾರಿ ಹಾಗೂ ಮೆಟ್ರೋಯೇತರ ನಗರದಲ್ಲಿ ಐದು ಬಾರಿ ಎಟಿಎಂ ವಹಿವಾಟು ನಡೆಸಬಹುದು

ಇನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯು ಜನವರಿ 1, 2022ರಿಂದ ಪ್ರಮುಖ ಬದಲಾವಣೆಗಳಿಗೆ ಒಳಗಾಗಲಿದೆ. ಇವುಗಳಲ್ಲಿ ರೆಸ್ಟೋರೆಂಟ್ ವಲಯದಲ್ಲಿ ಒದಗಿಸಲಾದ ಸಾರಿಗೆ ಮತ್ತು ಸೇವೆಗಳ ಮೇಲೆ ಇ-ಕಾಮರ್ಸ್ ಸೇವಾ ಆಪರೇಟರ್ಗಳ ಮೇಲಿನ ತೆರಿಗೆ ಹೊಣೆಗಾರಿಕೆಯೂ ಸೇರಿದೆ. ಆ್ಯಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್ಟಿ ಪಾವತಿಸಬೇಕಿದೆ. ಪಾದರಕ್ಷೆಗಳ ಮೇಲೆ ಶೇ.12ರಷ್ಟು, ರೆಡಿಮೇಡ್ ಬಟ್ಟೆ ಸೇರಿ ಎಲ್ಲಾ ಮಾದರಿ ಬಟ್ಟೆಗಳ ಮೇಲೆ ಶೇ.12ರಷ್ಟು ಜಿಎಸ್​ಟಿ ಕಟ್ಟಬೇಕಿದೆ.

ಲೀನಾಶ್ರಿ, ಪವರ್ ಟಿವಿ

- Advertisment -

Most Popular

Recent Comments