Sunday, October 2, 2022
Powertv Logo
Homeದೇಶಮೋದಿ ಕಾಶಿಯವರಾದರೆ ನಾನೂ ಸಹ ಅಸನ್ಸೋಲ್​ನವನೆ!- ಶತ್ರುಘ್ನ ಸಿನ್ಹಾ

ಮೋದಿ ಕಾಶಿಯವರಾದರೆ ನಾನೂ ಸಹ ಅಸನ್ಸೋಲ್​ನವನೆ!- ಶತ್ರುಘ್ನ ಸಿನ್ಹಾ

ಅಸನ್ಸೋಲ್: ಪ್ರಧಾನಿ ನರೇಂದ್ರ ಮೋದಿ ಕಾಶಿಯಿಂದ ಸ್ಪರ್ಧಿಸಬಹುದು, ಆದರೆ ಇಲ್ಲಿ ನಾನು ಹೇಗೆ ಹೊರಗಿನವನಾಗುತ್ತೇನೆ ಎಂದು ಅಸನ್ಸೋಲ್ ಲೋಕಸಭಾ ಕ್ಷೇತ್ರ ದ ಟಿಎಂಸಿ ಅಭ್ಯರ್ಥಿ, ಹಿರಿಯ ನಟ ಶತ್ರುಘ್ನ ಸಿನ್ಹಾ ಸೋಮವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮಮತಾ ಬ್ಯಾನರ್ಜಿ ನಿಜವಾದ ಐತಿಹಾಸಿಕ ನಾಯಕಿ, ಹುಲಿ. ಅವರ ಆಹ್ವಾನದ ಮೇರೆಗೆ ನಾನು ಇಲ್ಲಿದ್ದೇನೆ. ನನಗೆ ಅಸನ್ಸೋಲ್ ಮತ್ತು ಪಶ್ಚಿಮ ಬಂಗಾಳದ ಸಾರ್ವಜನಿಕರ ಮೇಲೆ ನಂಬಿಕೆಯಿದೆ, ನಾವು ಗೆಲ್ಲುತ್ತೇವೆ, ನ್ಯಾಯ ಗೆಲ್ಲುತ್ತದೆ ಎಂದರು. ಬಿಜೆಪಿಯನ್ನು ಕೇಳಿ, ಪ್ರಧಾನಿ ಕಾಶಿಯಿಂದ ಸ್ಪರ್ಧಿಸಬಹುದಾದರೆ ಇಲ್ಲಿ ನಾನು ಹೇಗೆ ಹೊರಗಿನವನಾಗುತ್ತೇನೆ ಎಂದು ಪ್ರಶ್ನಿಸಿದರು.

ಒಂದು ಕಾಲದ ಬಾಲಿವುಡ್ ಸ್ಟಾರ್ ಶತ್ರುಘ್ನ ಸಿನ್ಹಾ ಸಿನಿಮಾಗಳನ್ನು ಜನರು ಇಂದಿಗೂ ಎಂಜಾಯ್ ಮಾಡುತ್ತಾರೆ. ಬಾಲಿವುಡ್​ನಲ್ಲಿ ತಮ್ಮದೇ ಆದ ಮ್ಯಾನರಿಸಂ ಬೆಳೆಸಿಕೊಂಡಿದ್ದ ಶತ್ರು ಅಂದಿನ ಘಟಾನುಘಟಿ ನಾಯಕರಾದ ಅಮಿತಾಬ್, ಶಶಿಕಪೂರ್ ಮುಂತಾದ ಹಲವು ನಟರೊಂದಿಗೆ ತೆರೆ ಹಂಚಿಕೊಂಡಿದ್ದರು.

ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಶತ್ರು ಆ ಪಕ್ಷದಲ್ಲಿದ್ದರೂ, ಬಿಜೆಪಿಯ ಯಾವುದೇ ವಿಷಯ ಸರಿಕಾಣದಿದ್ದರೆ ಟೀಕಿಸಲು ಹಿಂಜರಿಯುತ್ತಿರಲಿಲ್ಲ. ಇದರಿಂದಾಗಿ ಬಿಜೆಪಿ ಹಲವು ಬಾರಿ ಇರಿಸುಮುರುಸು ಅನುಭವಿಸಿದ್ದೂ ಉಂಟು. ಕಡೆಗೂ ಅದೇ ಕಾರಣದಿಂದ ಶತ್ರು ಬಿಜೆಪಿ ಬಿಟ್ಟು, ಇದೀಗ ದೀದಿ ಮಮತಾ ಬ್ಯಾನರ್ಜಿ ಪಕ್ಷವಾದ ಟಿಎಂಸಿ ಸೇರಿ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದಾರೆ. ದಬಂಗ್ ಮೂಲಕ ಕೋಟ್ಯಾಂತರ ಪ್ರೇಕ್ಷಕರನ್ನು ಮರುಳು ಮಾಡಿ ರಾತ್ರೊ ರಾತ್ರಿ ಸ್ಟಾರ್ ಆದ ಸೋನಾಕ್ಷಿ ಸಿನ್ಹಾ ಇದೇ ಶತ್ರುಘ್ನ ಸಿನ್ಹಾ ಮಗಳು.

- Advertisment -

Most Popular

Recent Comments