Home ರಾಜ್ಯ ಮುಷ್ಕರ ವೇಳೆ ಗಲಾಟೆ ಮಾಡಿದರೆ ಬಂಧಿಸುತ್ತೇವೆ: ಕಮಲ್ ಪಂತ್

ಮುಷ್ಕರ ವೇಳೆ ಗಲಾಟೆ ಮಾಡಿದರೆ ಬಂಧಿಸುತ್ತೇವೆ: ಕಮಲ್ ಪಂತ್

ಬೆಂಗಳೂರು: ನಾಳೆ ರಾಜ್ಯ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ, ಬೆಂಗಳೂರಿನಲ್ಲಿ ಸದ್ಯಕ್ಕೆ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದ್ದು, ಯಾವ ಸಂಘಟನೆಗಳು   ಯಾವ ಪ್ರತಿಭಟನೆ ಮಾಡುವಂತಿಲ್ಲ. ಕೋವಿಡ್ ನಿಯಮ ಉಲ್ಲಂಘಿಸಿ ಪ್ರತಿಭಟನೆ ಮಾಡಿದರೆ, ಪ್ರತಿಭಟನೆಕಾರರನ್ನ ಬಂಧಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಕೆಲಸಕ್ಕೆ ಬರುವುದು ಅಥವಾ ಬಿಡುವುದು ಇಲಾಖೆಗೆ ಸಂಬಂಧ ಪಟ್ಟ ವಿಚಾರ. ಡ್ಯೂಟಿಗೆ ಹಾಜರಾಗುವವರಿಗೆ ಆರ್ಮ್ ಎಸ್ಕಾಟ್ ಭದ್ರತೆ ಒದಗಿಸುತ್ತೇವೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಏಪ್ರಿಲ್ 21ರವರೆಗೆ ಕೋವಿಡ್ ನಿಯಮ ಜಾರಿಯಲ್ಲಿದ್ದು, ಯಾರಾದ್ರೂ ಚೇಷ್ಟೆ ಮಾಡಿದರೆ ಅವರನ್ನ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ. ರಸ್ತೆಗಿಳಿದು ಕಲ್ಲು ತೂರಾಟ ಮತ್ತು ರಸ್ತೆಗಳನ್ನ ತಡೆಯುವುದಕ್ಕೆ ಮುಂದಾದರೆ, ಅವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಖಾಸಗಿ ಬಸ್ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕಮಲ್ ಪಂತ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

ಕೊರೋನಾ ಇಲ್ಲ ಅಂದವರ ಕಪಾಳಕ್ಕೆ ಬಾರಿಸಿ: ಸುನೇತ್ರ

ಬೆಂಗಳೂರು: ಕೊರೋನಾಗೆ ನಟಿ ಸುನೇತ್ರ ಪಂಡಿತ್ ಸಹೋದರಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಟಿ ಸುನೇತ್ರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರೋ ಓರ್ವ ಅಧಿಕಾರಿಯಿಂದ ನನ್ನ ಸಹೋದರಿ ಸಾವಾಗಿದೆ ಎಂದು ಸುಮನಹಳ್ಳಿ ಚಿತಾಗಾರ...

Recent Comments