Home P.Special ನೋಡೋಕು ಸೇಮ್ … ಮಾರ್ಕ್ಸೂ ಸೇಮ್ ..!

ನೋಡೋಕು ಸೇಮ್ … ಮಾರ್ಕ್ಸೂ ಸೇಮ್ ..!

ಮೊನ್ನೆಯಷ್ಟೇ ಸಿಬಿಎಸ್ಇ 12 ನೇ ತರಗತಿಯ ರಿಸಲ್ಟ್ ಹೊರಬಿದ್ದಿದೆ. ಈ ಬಾರಿ ಶೇ.88.78 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇಲ್ಲೂ ಬಾಲಕಿಯರದ್ದೇ ಮೇಲುಗೈ. ಶೇ.92.15 ರಷ್ಟು ಬಾಲಕಿಯರು ಪಾಸ್ ಆಗಿದ್ರೆ, ಶೇ.86.19 ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.
ನೊಯ್ಡಾದ ಇಬ್ಬರು ಬಾಲಕಿಯರೂ ಈ ಬಾರಿ ಸಿಬಿಎಸ್ಇ 12ನೇ ಕ್ಲಾಸ್ ಎಕ್ಸಾಮ್ ಬರೆದಿದ್ರು. 90ಕ್ಕೂ ಹೆಚ್ಚು ಅಂಕ ಗಳಿಸಿ ಇಬ್ಬರೂ ಪಾಸ್ ಆಗಿದ್ದಾರೆ. ಇಬ್ಬರೂ ಶೇ. 95.8 ಮಾರ್ಕ್ಸ್ ಸ್ಕೋರ್ ಮಾಡಿದ್ದಾರೆ. ಅದರಲ್ಲೇನಿದೆ ವಿಶೇಷ ಅನ್ನ ಬಹುದು. ವಿಶೇಷ ಏನಂದ್ರೆ, ಇವರಿಬ್ಬರೂ ಟ್ವಿನ್ ಸಿಸ್ಟರ್ಸ್. ಈ ತದ್ರೂಪಿಗಳ ಹೆಸರು ಮಾನಸಿ ಮತ್ತು ಮಾನ್ಯ. ಅವಳಿ ಸಹೋದರಿಯರಾದ ಇವರು ಎಕ್ಸಾಮ್ ನಲ್ಲಿ ಸೇಮ್ ಟು ಸೇಮ್ ಅಂಕಗಳನ್ನು ಪಡೆದಿರೋದು ಅಚ್ಚರಿ ಮೂಡಿಸಿದೆ.
ಮಾನಸಿ ಮತ್ತು ಮಾನ್ಯಾ ದೆಹಲಿಯ ಗ್ರೇಟರ್ ನೊಯ್ಡಾದಲ್ಲಿರುವ ಏಸ್ಟರ್ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಈ ಇಬ್ಬರೂ ಸಹೋದರಿಯರು ಈ ಬಾರಿಯ ಬೋರ್ಡ್ ಎಕ್ಸಾಮ್ ನಲ್ಲಿ ಶೇ.95.8 ಅಂಕ ಗಳಿಸಿದ್ದಾರೆ. ಇನ್ನೂ ಮಜ ಅಂದ್ರೆ, ಇಬ್ಬರೂ ಒಂದಷ್ಟು ಸಬ್ಜೆಕ್ಟ್ ಗಳಲ್ಲಿ ಸೇಮ್ ಅಂಕ ಪಡೆದಿದ್ದಾರೆ. ಇಂಗ್ಲೀಷ್ ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ 98, ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ದೈಹಿಕ ಶಿಕ್ಷಣದಲ್ಲಿ 95 ಅಂಕಗಳನ್ನು ಪಡೆದಿದ್ದಾರೆ.
“ನಾವಿಬ್ಬರೂ ಟ್ವಿನ್ಸ್ ಅಂತ ಎಲ್ಲರೂ ಗುರುತಿಸ್ತಾರೆ. ನಮ್ಮಿಬ್ಬರ ಹೆಸರು ಮಾತ್ರ ಬೇರೆ ಬೇರೆ ಇದೆ ಅಷ್ಟೆ. ಇಬ್ಬರೂ ಉತ್ತಮ ಅಂಕಗಳನ್ನು ಪಡೆಯುತ್ತೇವೆ ಎಂದು ಅಂದುಕೊಂಡಿದ್ವಿ, ಆದ್ರೆ ಇಬ್ಬರೂ ಸೇಮ್ ಟು ಸೇಮ್ ಸ್ಕೋರ್ ಮಾಡ್ತೀವಿ ಅಂದುಕೊಂಡಿರಲಿಲ್ಲ. ನನಗಿಂತ ಮಾನ್ಯ ಹೆಚ್ಚು ಅಂಕ ಪಡಿತಾಳೆ ಎಂದುಕೊಂಡಿದ್ದೆ” ಅಂತ ಮಾನಸಿ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾಳೆ.
“ಎರಡು ವರ್ಷದ ಹಿಂದೆ, ಹೀಗೇ ಯಾರೋ ಮತ್ತೊಬ್ಬ ಟ್ವಿನ್ಸ್ ಸೇಮ್ ಅಂಕಗಳನ್ನು ಸ್ಕೋರ್ ಮಾಡಿದ್ದರ ಬಗ್ಗೆ ನಾನು ಓದಿದ್ದೆ. ಆಗ ಇದು ಜಸ್ಟ್ ಕಾಕತಾಳೀಯ ಅಷ್ಟೇ ಬಿಡು ಅಂದುಕೊಂಡಿದ್ದೆ. ಈಗ ನಾವಿಬ್ಬರೆ ಹೀಗೆ ಸ್ಕೋರ್ ಮಾಡಿರೋದು ನಂಬೋಕೆ ಆಗ್ತಿಲ್ಲ. ನಾನಗೆ ಕೆಮಿಸ್ಟ್ರಿ ಸಬ್ಜೆಕ್ಟ್ ಇಷ್ಟ, ಮಾನಸಿಗೆ ಫಿಸಿಕ್ಸ್ ಇಷ್ಟ. ಒಬ್ಬರಿಗೊಬ್ಬರು ಪೈಪೋಟಿ ಕೊಡೊ ಹಾಗೇ ಓದಿ ಎಕ್ಸಾಮ್ ಬರೆದಿದ್ವಿ” ಎಂದು ಮಾನ್ಯಾ ಹೇಳಿದ್ದಾಳೆ. ಮುಂದೆ ಈ ಇಬ್ಬರೂ ಸಹೋದರಿಯರೂ ಎಂಜಿನಿಯರಿಂಗ್ ಮಾಡೋ ಪ್ಲಾನ್ ನಲ್ಲಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments