ಐಸಿಸಿ ವರ್ಲ್ಡ್​​ಕಪ್​ ಟೀಮ್​ನಲ್ಲಿ ಟೀಮ್ ಇಂಡಿಯಾದ ಇಬ್ಬರಿಗೆ ಮಾತ್ರ ಸ್ಥಾನ..!

0
879

2019ರ ವಿಶ್ವಕಪ್ ಮುಗಿದಿದೆ. ಆತಿಥ್ಯ ವಹಿಸಿದ್ದ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವರ್ಲ್ಡ್​ಕಪ್ ಗೆದ್ದ ಸಂಭ್ರಮದಲ್ಲಿದೆ. ಈ ನಡುವೆ ಐಸಿಸಿ ವರ್ಲ್ಡ್​​ಕಪ್​ ಇಲೆವೆನ್ ಟೀಮ್ ಅನ್ನು ಪ್ರಕಟಿಸಿದೆ. ಅದರಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಚಾಂಪಿಯನ್ ಇಂಗ್ಲೆಂಡ್​ನ ನಾಲ್ವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನ್ಯೂಜಿಲೆಂಡ್​ ಕ್ಯಾಪ್ಟನ್ ಕೇನ್​ ವಿಲಿಯಮ್ಸನ್​ ಐಸಿಸಿ ವರ್ಲ್ಡ್​ಕಪ್​ ಟೀಮ್​ನ ಕ್ಯಾಪ್ಟನ್ ಆಗಿದ್ದಾರೆ.
ಟೀಮ್​ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಹಾಗೂ ವೇಗಿ ಜಸ್​​ಪ್ರೀತ್ ಬುಮ್ರಾ ಈ ಟೀಮ್​ನಲ್ಲಿ ಸ್ಥಾನ ಪಡೆದ ಭಾರತೀಯರು.

ತಂಡ ಇಂತಿದೆ :
ರೋಹಿತ್‌ ಶರ್ಮಾ (ಭಾರತ)- 648 ರನ್‌ (ಟೂರ್ನಿಯಲ್ಲಿ ಅತ್ಯದಿಕ ರನ್​ ಹಾಗೂ 5 ದಾಖಲೆಯ ಶತಕ)
ಜೇಸನ್‌ ರಾಯ್‌ (ಇಂಗ್ಲೆಂಡ್‌)- 443 ರನ್‌
ಕೇನ್ ವಿಲಿಯಮ್ಸನ್‌ (ನಾಯಕ, ನ್ಯೂಜಿಲ್ಯಾಂಡ್‌)- 578 ರನ್‌
ಜೋ ರೂಟ್‌ (ಇಂಗ್ಲೆಂಡ್‌)- 556 ರನ್‌
ಶಕಿಬ್‌ ಅಲ್‌ ಹಸನ್‌ (ಆಲ್​ರೌಂಡರ್- ಬಾಂಗ್ಲಾದೇಶ), 606 ರನ್‌ ಮತ್ತು 11 ವಿಕೆಟ್‌
ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌)- 465 ರನ್‌
ಅಲೆಕ್ಸ್‌ ಕ್ಯಾರಿ (ವಿಕೆಟ್ ಕೀಪರ್- ಆಸ್ಟ್ರೇಲಿಯಾ)- 375 ರನ್‌, 20 ಕ್ಯಾಚ್‌
ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ)- 27 ವಿಕೆಟ್‌
ಜೋಫ್ರಾ ಆರ್ಚರ್‌ (ಇಂಗ್ಲೆಂಡ್‌)- 20 ವಿಕೆಟ್‌
ಲೂಕಿ ಫೆರ್ಗುಸನ್ (ನ್ಯೂಜಿಲ್ಯಾಂಡ್‌)- 21 ವಿಕೆಟ್‌
ಜಸ್‌ಪ್ರೀತ್‌ ಬುಮ್ರಾ (ಭಾರತ)- 18 ವಿಕೆಟ್‌

LEAVE A REPLY

Please enter your comment!
Please enter your name here