Saturday, May 28, 2022
Powertv Logo
Homeವಿದೇಶಮಹಿಳಾ ಟಿ20 ವರ್ಲ್ಡ್​ಕಪ್ : ಟೀಮ್ ಇಂಡಿಯಾ ಶುಭಾರಂಭ

ಮಹಿಳಾ ಟಿ20 ವರ್ಲ್ಡ್​ಕಪ್ : ಟೀಮ್ ಇಂಡಿಯಾ ಶುಭಾರಂಭ

ಸಿಡ್ನಿ : ಮಹಿಳಾ ಟಿ20 ವರ್ಲ್ಡ್​​ಕಪ್​ನ ಚೊಚ್ಚಲ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ಪಡೆದು ಶುಭಾರಂಭ ಮಾಡಿದೆ. ಪೂನಂ ಯಾದವ್ (4 ವಿಕೆಟ್) ಹಾಗೂ ಶಿಖಾ ಪಾಂಡೆ (3 ವಿಕೆಟ್​) ಮಾರಕ ದಾಳಿಗೆ ತತ್ತರಿಸಿದ ಅತಿಥೇಯ ಆಸೀಸ್​ 17 ರನ್​​ ಗಳಿಂದ ಸೋಲನುಭವಿಸಿತು.
ಸಿಡ್ನಿ ಶೋಗ್ರೌಂಡ್​​​​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್​ಪ್ರೀತ್​ ಕೌರ್ ನೇತೃತ್ವದ ಭಾರತ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (29), ಜೆಮಿಯಾ ರೊಡ್ರಿಗಸ್ (26) ಮತ್ತು ದೀಪ್ತಿ ಶರ್ಮಾ (ಅಜೇಯ 49) ಆಟದ ನೆರವಿನಿಂದ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 132ರನ್ ಮಾಡಿತು. ಗುರಿಬೆನ್ನತ್ತಿದ ಆಸೀಸ್​​​​​​​​​​​ ಪರ ವಿಕೆಟ್ ಕೀಪರ್ ಹಾಗೂ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ (51) ಮತ್ತು ಆಶ್ಲೀ ಗಾರ್ಡ್ನರ್ (34) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮುಟ್ಟಿಲ್ಲ..! ಅಂತಿಮವಾಗಿ ಇನ್ನೂ ಒಂದು ಬಾಲ್ ಬಾಕಿ ಇರುವಂತೆ 115ರನ್​​ಗಳಿಗೆ ಆಲೌಟ್ ಆಗಿ ಸೋಲನುಭವಿಸಿತು.
ಭಾರತದ ಪರ ಪೂನಂ ಯಾದವ್ 4 ವಿಕೆಟ್, ಶಿಖಾ ಪಾಂಡೆ 3 ವಿಕೆಟ್​ ಮತ್ತು ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments