ಟಿ20 ವರ್ಲ್ಡ್​ಕಪ್​ ವೇಳಾಪಟ್ಟಿ ಪ್ರಕಟ

0
599

2020ರ ಪುರುಷ ಮತ್ತು ಮಹಿಳಾ ಟಿ20 ವರ್ಲ್ಡ್​ಕಪ್​ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಆಸ್ಟ್ರೇಲಿಯಾದ ಸುಮಾರು 13 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ.
ಪುರುಷರ ಟಿ20 ವರ್ಲ್ಡ್​ಕಪ್​ನ ಮೊದಲ ಸುತ್ತಿನ ಮ್ಯಾಚ್​ಗಳು ಅಕ್ಟೋಬರ್​ 18ರಿಂದ 23ರವರೆಗೆ ನಡೆಯಲಿವೆ. ದ್ವಿತೀಯ ಸುತ್ತಿನ ಪಂದ್ಯಗಳು ಅಕ್ಟೋಬರ್​ 24ರಿಂದ ನವೆಂಬರ್ 8ರವರೆಗೆ ನಡೆಯುತ್ತವೆ. ಇನ್ನು ಮಹಿಳಾ ವಿಶ್ವಕಪ್ ಫೆಬ್ರವರಿ 21ರಿಂದ ಮಾರ್ಚ್​ 8ರವರೆಗೆ ನಡೆಯುತ್ತದೆ.

ವನಿತೆಯರ ವಿಭಾಗ :
ಮಹಿಳಾ ಟಿ20 ವಿಶ್ವಕಪ್​ ಫೆಬ್ರವರಿ 21ರಿಂದ ಮಾರ್ಚ್​ 8ರವರೆಗೆ ನಡೆಯಲಿದೆ. ಗ್ರೂಪ್ ‘ಎ’ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಭಾರತ, ಶ್ರೀಲಂಕಾ(ಕ್ವಾಲಿಪೈಯರ್ 1) ತಂಡಗಳು ಸೆಣಸಲಿವೆ. ಗ್ರೂಪ್ ‘ಬಿ’ನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ( ಕ್ವಾಲಿಪೈಯರ್ 2) ತಂಡಗಳಿವೆ. ಮಾರ್ಚ್​ 5ಕ್ಕೆ ಸೆಮಿಫೈನಲ್ , 8ಕ್ಕೆ ಫೈನಲ್ ನಡೆಯುತ್ತೆ.

ಪುರುಷರ ವಿಭಾಗ :
ಪುರುಷರ ವರ್ಲ್ಡ್​​ಕಪ್​ ಅಕ್ಟೋಬರ್​ 18ರಿಂದ 23ರವರೆಗೆ ನಡೆಯಲಿದೆ. ಗ್ರೂಪ್ ‘ಎ’ನಲ್ಲಿ ಆಸ್ಟ್ರೇಲಿಯಾ, ವೆಸ್ಟ್​ಇಂಡೀಸ್​, ನ್ಯೂಜಿಲೆಂಡ್​ ಮತ್ತು ಅರ್ಹತಾ ಸುತ್ತಿನಲ್ಲಿ ಗೆದ್ದ 2 ಟೀಮ್​ಗಳು ಇರುತ್ತವೆ. ಬಿ ಗ್ರೂಪ್​ನಲ್ಲಿ ಭಾರತ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನ್​ ಮತ್ತು ಅರ್ಹತಾ ಸುತ್ತಿನಲ್ಲಿ ಗೆದ್ದ ಟೀಮ್​ಗಳು ಇರುತ್ತವೆ. ನವಂಬರ್ 11 ಮತ್ತು12 ಸೆಮಿಫೈನಲ್​​ ನಡೆಯಲಿದ್ದು, ನವಂಬರ್ 15 ರಂದು ಫೈನಲ್ ನಡೆಯುತ್ತದೆ.

LEAVE A REPLY

Please enter your comment!
Please enter your name here