ನವದೆಹಲಿ : ಜುಲೈ 29ರಂದು ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ 5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ. ಒಟ್ಟು 36 ವಿಮಾನಗಳಲ್ಲಿ ಮೊದಲ ಹಂತದಲ್ಲೀಗ 5 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯನ್ನು ಸೇರ್ಪಡೆಗೊಳ್ಳುತ್ತಿವೆ.
ಜುಲೈ 29ರಂದೇ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಅವುಗಳ ಹಾರಾಟ ಪರೀಕ್ಷೆ ನಡೆಯಲಿದೆ. IAF ಸಿಬ್ಬಂದಿಗೆ ರಫೇಲ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ತ್ವರಿತವಾಗಿ ಅದರ ಹಾರಾಟ ತರಬೇತಿಗೆ ವ್ಯವಸ್ಥೆ ಮಾಡಲಾಗ್ತಿದೆ ಅಂತ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ತಿಳಿಸಿದ್ದಾರೆ.
ಭಾರತ ಫ್ರಾನ್ಸ್ನ ಡಸಾಲ್ಟ್ ಸಂಸ್ಥೆಯಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು, ಅದರ ಭಾಗವಾಗಿ 5 ವಿಮಾನಗಳು ಭಾರತಕ್ಕೆ ಬರುತ್ತಿವೆ. ಮೊದಲ ಹಂತದಲ್ಲಿ ಬರುತ್ತಿರೋ 5 ವಿಮಾನಗಳು ಅಂಬಾಲಾ ವಾಯುನೆಲೆಗೆ ಆಗಮಿಸಲಿದ್ದು, ಮುಂದಿನ ಹಂತದಲ್ಲಿ ಬರುವ ಮತ್ತೊಂದು ಸ್ಕ್ವಾಡ್ರನ್ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಯಾಗಲಿದೆ.