ಭಾರತೀಯ ಸೇನೆಗೆ ಹುತಾತ್ಮ ಯೋಧ ಪ್ರಸಾದ್ ಮಹದಿಕ್​ ಪತ್ನಿ..!

0
291

ನವದೆಹಲಿ : ಹುತಾತ್ಮ ಯೋಧರೊಬ್ಬರ ಪತ್ನಿ ಭಾರತೀಯ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಸಿದ್ಧರಾಗಿದ್ದಾರೆ.
ಸೇನಾ ಕಾರ್ಯಚರಣೆಯಲ್ಲಿ ಹುತಾತ್ಮರಾಗಿದ್ದ ಮೇಜರ್ ಪ್ರಸಾದ್ ಮಹದಿಕ್ ಅವರ ಪತ್ನಿ ಗೌರಿ ಮಹದಿಕ್ ಅವರು ಸೇನೆಗೆ ಸೇರಿದ ವೀರ ವನಿತೆ. ಮೇಜರ್ ಪ್ರಸಾದ್ ಮಹದಿಕ್ ಅವರು 2017ರ ಡಿಸೆಂಬರ್​ನಲ್ಲಿ ಅರುಣಾಚಲ ಪ್ರದೇಶದ ಗಡಿಭಾಗ ತವಾಂಗ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದರು.
32 ವರ್ಷದ ಗೌರಿ ಮಹದಿಕ್ ಅವರು ಮೂಲತಃ ಮುಂಬೈನ ವಿರಾರ್​ ಪ್ರದೇಶದವರು. ಪತಿ ಹುತಾತ್ಮರಾದಾಗ ತಾನೂ ಸೇನೆ ಸೇರಲು ಡಿಸೈಡ್​ ಮಾಡಿದ ಅವರು ಒಂದು ವರ್ಷದಿಂದ ಮಿಲಟರಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ಸೇನೆಗೆ ಸೇರ್ತಿದ್ದಾರೆ. 2ನೇ ಪ್ರಯತ್ನದಲ್ಲಿ ಎಸ್​​ಎಸ್​ಬಿ (ಸರ್ವೀಸ್​​ ಸೆಲೆಕ್ಷನ್ ಬೋರ್ಡ್​) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ವಿಧವೆಯರ ವಿಭಾಗದಲ್ಲಿ ಟಾಪರ್ ಕೂಡ ಹೌದು.
ಹುತಾತ್ಮರಾದ ಪತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ತಾನು ಸೇನೆಗೆ ಸೇರುತ್ತಿರುವುದಾಗಿ ಗೌರಿ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here