‘ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಆ ಶಕ್ತಿಗಳಿಗೆ ಮತ್ತಷ್ಟು ಶಕ್ತಿ ಬಂದಿದೆ. ರಾಜ್ಯ ಸರ್ಕಾರ, ಗೃಹಸಚಿವರು ಗಟ್ಟಿತನ ತೋರಿಸಿ, ಅವರ ಮನೆ ಹೊಕ್ಕು ಹೊರತರಬೇಕು. ಅವರನ್ನು ಮುಗಿಸಲು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ರೀತಿಯ ಘಟನೆ ಕರ್ನಾಟಕದಲ್ಲಿ ಮರುಕಳಿಸಲು ಬಿಡಬಾರದು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕರ್ನಾಟಕದಲ್ಲಿ ಕೆಟ್ಟ ಚಾಳಿ ಪ್ರಾರಂಭವಾಗಿದೆ. ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ. ಆರಗ ಜ್ಞಾನೇಂದ್ರ ಹೀಗೆ ಇದ್ದರೆ ಆಗುವುದಿಲ್ಲ. ಮೃದುವಾಗಿದ್ದವರಿಗೆ ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ, ಲೋಕೋಪಯೋಗಿ ಖಾತೆ ನೀಡುವುದು ಸೂಕ್ತ. ಸಿಎಂ ಇದೇ ರೀತಿ ಇದ್ದರೆ ಅವರಿಗೇ ಮುಂದೆ ಸಮಸ್ಯೆಯಾಗುತ್ತೆ ಎಂದರು.