Home ರಾಜ್ಯ ನನಗೆ ಜೀವ ಭಯವಿದೆ : ದಿಂಗಾಲೇಶ್ವರ ಶ್ರೀಗಳು

ನನಗೆ ಜೀವ ಭಯವಿದೆ : ದಿಂಗಾಲೇಶ್ವರ ಶ್ರೀಗಳು

ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿ ವಿಚಾರದಲ್ಲಿ ನೀವು ಹೆಚ್ಚಿಗೆ ಮಾತನಾಡಿದರೆ ನಿಮ್ಮನು ಬಿಡುವದಿಲ್ಲ ಎಂದು ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಮೂರು ಸಾವಿರ ಮಠದ ಆಸ್ತಿ ಪರಭಾರೆ ಬಗ್ಗೆ ದಾಖಲಾತಿ ಬಿಡುಗಡೆ ಮಾಡಿ, ಮಾತನಾಡಿದ ಅವರು ನನಗೆ ಜೀವ ಭಯವಿದೆ, ಸರ್ಕಾರದಿಂದ ರಕ್ಷಣೆ ಸಿಗುತ್ತಿಲ್ಲ. ರಕ್ಷಣೆ ಕೊಡಿ ಎಂದು ಹಲವು ಸಲ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೂ ಸರ್ಕಾರ ರಕ್ಷಣೆ ನೀಡಿಲ್ಲ ಎಂದರು.

ನಾನು ಮೂರು ಸಾವಿರ ಮಠದ ಭಕ್ತ, ಮಠದ ಶಿಷ್ಯ. ನನ್ನ ಪ್ರಾಣ ಹೋದರೂ ಚಿಂತೆ ಇಲ್ಲಾ, ಮಠದ ಆಸ್ತಿ ಉಳಿಯಬೇಕು. ಗೃಹ ಮಂತ್ರಿಗಳೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಮ್ಮನ್ನ ಹತ್ತಿಕ್ಕಬಹುದು,  ಈ ಹಿಂದೆ 7 ಬಾರಿ ಕಾರು ಅಪಘಾತ ಮಾಡ್ತಾರೆ, ನನ್ನ ಕಾರಿಗೆ ಬೆಂಕಿ ಹಚ್ಚುತ್ತಾರೆ ನಾನು ಜಗ್ಗುವುದಿಲ್ಲ. ನಾನು ಮೊನ್ನೆ 24 ರಂದು ಹುಬ್ಬಳ್ಳಿಯಿಂದ ಹೋಗುವಾಗ ನನ್ನ ಕಾರಿಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ.  ಕಾರು ನಿಲ್ಲಿಸಿ, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಕುಂದಗೋಳ ರಸ್ತೆಯ ಮಾರ್ಗದಲ್ಲಿ ಹೋಗುವಾಗ ನನಗೆ ಅಟ್ಯಾಕ್ ಮಾಡಲು ಮುಂದಾಗಿದ್ದರು. ಈ‌ ಹೋರಾಟವನ್ನ ಕೈಬಿಡಿ ಎಂದು ಒತ್ತಡ ಹಾಕಿದ್ದಾರೆ ಎಂದರು.

ಮಠದ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡಬಾರದೆಂದು ಕೋರ್ಟ್ ಆದೇಶದವಿದ್ದರೂ  500 ಕೋಟಿ ಬೆಲೆ ಬಾಳುವ 25 ಎಕರೆ ಜಮೀನು ಕೊಡಲಾಗಿದೆ. ಮೂರು ಸಾವಿರ ಮಠ ತಾವೇ ಖುದ್ದಾಗಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಿದ್ದರೆ ನಾನು ಪ್ರಶ್ನೇ ಮಾಡ್ತಾ ಇರಲಿಲ್ಲ. ಮೂರು ಸಾವಿರ ಮಠದ ವತಿಯಿಂದ ಉಚಿತ ಸೇವೆ ನಡೆಯಲಿ.‌ಆದರೆ ಕೆ ಎಲ್ ಇ ಸಂಸ್ಥೆಗೆ ನೀಡಿದ್ದು ಕಾನೂನು ಬಾಹಿರ ಎಂದರು.

ಮಠದ ಉನ್ನತ ಸಮಿತಿ ‌ಮಾಡಿದ್ದು , ಗದಗದ ತೋಂಟದಾರ್ಯ ಮಠದ ಲಿಂಗೈಕ್ಯ ಸ್ವಾಮೀಜಿಗಳ ಕುತಂತ್ರದಿಂದ. ಲಿಂಗೈಕ್ಯ ತೋಂಟದಾರ್ಯ ಶ್ರೀ ಗಳ ಕುತಂತ್ರದಿಂದ ಮೂರು ಸಾವಿರ ಮಠ ನಾಶವಾಗುತ್ತಿದೆ. ಮೂರು ಸಾವಿರ ಮಠದ ಆಸ್ತಿಯಲ್ಲಿ ಆಸ್ಪತ್ರೆ ಕಟ್ಟೋದು ಬೇಡ ಎಂದಿದ್ದೆ. ಹುಬ್ಬಳ್ಳಿಗೆ ವೈದ್ಯಕೀಯ ವಿದ್ಯಾಲಯ ಆಗುವುದು ನನಗು ಸಂತೋಷ ಇದೆ. ಮೂರು ಸಾವಿರ ಮಠ ಶಕ್ತಿಹಿನ ಆಗಬಾರದು.

17-07-2009 ರಲ್ಲಿ ‌ಒಂದು ಪತ್ರ ಸಿದ್ದತೆ ಆಗುತ್ತದೆ.  ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಿತ್ತದೋಷ ಮುಖರ್ಜಿ ಅವರನ್ನ ಸುಪ್ರೀಂ ಕೋರ್ಟ್ ನೇಮಕ ಮಾಡುತ್ತದೆ. ಅವರ ಪತ್ರದಲ್ಲಿ ಮಠದ ಆಸ್ತಿಯನ್ನ ಯಾರು ಪರಭಾರೆ ಮಾಡಬಾರದು ಎಂದು ಹೇಳಿದೆ.  ಈ ಒಂದು ಆದೇಶವನ್ನ ತಿದ್ದುಪಡಿ ಮಾಡಲಾಗಿದೆ. ಧಾರವಾಡದಲ್ಲಿ ಈ ಆದೇಶವನ್ನ ತಿದ್ದುಪಡಿ ಮಾಡಲಾಗಿದೆ.

ಮೂರು ಸಾವಿರ ಮಠದ ಆಸ್ತಿಯನ್ನ ನುಂಗಲು ಹೊರಟಿದ್ದಾರೆ. ನಿವೃತ್ತ ನ್ಯಾಯಾಧೀಶ ಸಿ.ವೈ.ಭರಮಗೌಡ ಮಠದ ಆಸ್ತಿ ವಿಚಾರದ ಆರ್ಬಿಟೇಟರ್ ನ್ಯಾಯಾಧೀಶರಾಗಿದ್ದರು. ಇವರು ಆಸ್ತಿಯನ್ನ ಪರಭಾರೆ ಮಾಡಬಹುದು ಎಂದು 2012 ರಲ್ಲಿ ಆದೇಶ ಮಾಡಿದ್ದಾರೆ. ಈ ಭಾಗದ ಕೆಲವು ಜನ ಪ್ರತಿನಿಧಿಗಳಿಗೆ ಮೂರು ಸಾವಿರ ಮಠದ ಮೇಲೆ ಕಾಳಜಿ ಇಲ್ಲ ಎಂದರು.

ಇನ್ನು ಮಲ್ಲಿಕಾರ್ಜುನ ಎನ್.ಎಚ್. ಎನ್ನುವವರಿಗೆ ಕೇಶ್ವಾಪುರದ 2 ಎಕರೆ ಜಮೀನನ್ನ‌ ಮಾರಾಟ ಮಾಡಲಾಗಿದೆ. ಮಠಕ್ಕೆ ಹಣದ ಅವಶ್ಯಕತೆ ಇರುವುದರಿಂದ 10 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಖರೀದಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಠಕ್ಕೆ ಹಣದ ಸಮಸ್ಯೆ ಇದ್ದರೆ,  25 ಎಕರೆ ಜಮೀನನ್ನ ದಾನ‌ ಮಾಡುವುದು ಸರಿಯೇ.

ದಾನ ಮಾಡಿದ್ದು ಸರಿ ಆದ್ರೆ, ದಾನ ಯಾರಿಗೆ ಮಾಡಬೇಕು. ಸಮರ್ಥರಿಗೆ ದಾನ ಮಾಡಬಾರದು, ಹುಬ್ಬಳ್ಳಿಯ ತುಂಬಾ ಆಸ್ತಿಯನ್ನ ಹೊಂದಿರುವವರಿಗೆ ಆಸ್ತಿ ದಾನ ಮಾಡಿದ್ದು ಏಕೆ. ನಾನು ಮೂರು ಸಾವಿರ ಮಠದ ಆಸ್ತಿಗಾಗಿ ನಾನು ಯಾವತ್ತು ಸುಮ್ಮನೆ ಕುಳಿತಿಲ್ಲ.  ಮೂರು ಸಾವಿರ ಮಠಕ್ಕೆ ಕೇವಲ 33 ಎಕರೆ ಜಮೀನು ಇದೆ. ಕೆಎಲ್‌ಇ ಸಂಸ್ಥೆ ಬೆಳೆಯಲಿ, ಮೂರು ಸಾವಿರ ಮಠ ಅವನತಿಗೆ ಹೋಗಬಾರದು.

1 ಕೋಟಿ 25 ಲಕ್ಷ ಹಣವನ್ನ ಮೂರು ಸಾವಿರ ಮಠದ ನ್ಯಾಯ ಬಗೆಹರಿಸಲು ಮಠದ ಭಕ್ತರಿಂದ ತಂದಿದ್ದೇನೆ. ಈ ಮಠದಲ್ಲಿ ಈಗ ಆಡಳಿತ ಮಾಡುವವರಿಗೆ ಅವಾಗ 10 ಲಕ್ಷ ಕೊಡಲು ಆಗಲಿಲ್ಲ. ಮೂರು ಸಾವಿರ ಮಠದ ಆಡಳಿತ ಮಂಡಳಿಯವರ ಅಪ್ಪನ ಆಸ್ತಿ ಇರಲಿಲ್ಲ ಏನೂ..?

ಮೂರು ಸಾವಿರ ಮಠದ ಆಸ್ತಿ ಬೇರೆಯವರಿಗೆ ಕೊಡಲು ಇವರು ಯಾರು..? ನಿಮ್ಮ ಆಸ್ತಿ ಕೊಡಿ, ಮಠದ ಆಸ್ತಿ ಮಠಕ್ಕೆ ಬಿಡಿ ಎಂದು‌ ಮಠದ ಉನ್ನತ ಸಮಿತಿ ಸದಸ್ಯರಿಗೆ ಸವಾಲು ಹಾಕಿದರು.

LEAVE A REPLY

Please enter your comment!
Please enter your name here

- Advertisment -

Most Popular

‘ಘಟನೆಯ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ ಪ್ರಸನ್ನ್ ಕುಮಾರ್ ಆಗ್ರಹ’

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ...

ಉಸಿರು ಕಟ್ಟಿಸುವ ವಾತಾವರಣವೇ ಪಕ್ಷ ಬಿಡಲು ಕಾರಣ: ರಾಜಣ್ಣ ಕೊರವಿ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ‌ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ರಾಜಣ್ಣ ಕೊರವಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...

‘ಉದ್ದವ್ ಠಾಕ್ರೆ ವಿರುದ್ಧ ಸಿಡಿದೆದ್ದ ಕರವೇ‌ ಕಾರ್ಯಕರ್ತರು’

ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ...

‘ಮೃತ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ’

ಶಿವಮೊಗ್ಗ: ಕಲ್ಲು ಕ್ವಾರಿ ದುರಂತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧಿಗ್ಬ್ರಮೆಗೊಂಡಿದ್ದಾರೆ. ಸ್ಪೋಟದಿಂದ ಜೀವ ಹಾನಿಯಾಗಿರೋದು ನೋವಿನ ಸಂಗತಿ. ಇಂತಹದೊಂದು ದುರಾದೃಷ್ಟಕರ ಘಟನೆ ನೆಡೆಯಬಾರದಿತ್ತು. ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ...

Recent Comments