ರಾಮನಗರ : ಚಾಕುವಿನಿಂದ ಚುಚ್ಚಿ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ರಾಮನಗರದ ರೆಹಮಾನಿಯ ನಗರದಲ್ಲಿ ನಡೆದಿದೆ.
15 ವರ್ಷಗಳ ಹಿಂದೆ ಬಷೀರ್ ಪಾಷಾ ಎಂಬಾತನನ್ನು ವಿವಾಹವಾಗಿದ್ದ ಮಾಬಿನ ಬಾನು ಬಷೀರ್ ಪಾಷಾ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಿಕೊಂಡಿದ್ದರು. ಪತ್ನಿಯ ಶೀಲದ ಮೇಲೆ ಅನುಮಾನಗೊಂಡು ಕೊಲೆ ಮಾಡಿದ್ದಾನೆಂದು ಶಂಕೆ ಉಂಟಾಗಿದೆ. ಬೆಂಗಳೂರಿನ ರಾಜ ರಾಜೇಶ್ವರಿ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ,ಪರಿಶೀಲನೆ ನಡೆಸಿದ್ದು, ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.