Sunday, June 26, 2022
Powertv Logo
Homeರಾಜ್ಯಕಂಟೈನ್ಮೆಂಟ್ ಝೋನ್ ಮಾಡದಂತೆ ಪೊಲೀಸರ ವಿರುದ್ಧ ವಾಗ್ದಾಳಿಗಿಳಿದ ಸ್ಥಳೀಯರು

ಕಂಟೈನ್ಮೆಂಟ್ ಝೋನ್ ಮಾಡದಂತೆ ಪೊಲೀಸರ ವಿರುದ್ಧ ವಾಗ್ದಾಳಿಗಿಳಿದ ಸ್ಥಳೀಯರು

ದಾವಣಗೆರೆ: ಗ್ರೀನ್ ಝೋನ್ ಆಗಿದ್ದ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ರೆಡ್ ಝೋನ್ಆಗಿ ಮಾರ್ಪಾಡಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ  ಸೋಂಕಿತರು ಪತ್ತೆಯಾಗಿರುವ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ನಿರ್ಧರಿಸಿದೆ. ಆದರೆ ಅದಕ್ಕೆ ಅಲ್ಲಿನ ಜನ ಸ್ಪಂದನೆ ನೀಡುತ್ತಿಲ್ಲ.

ಇತ್ತೀಚೆಗೆ ದಾವಣಗೆರೆಯಲ್ಲಿ ಅಜ್ಮೀರ್ ಪ್ರಯಾಣ ಬೆಳೆಸಿದ 22 ವರ್ಷದ ಯುವಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ 22 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾತ್ತು. ಇದರ ಹಿನ್ನೆಲೆ ಪೇಷೆಂಟ್ ನಂಬರ್ 847 ವಾಸವಾಗಿದ್ದ ಶಿವನಗರವನ್ನು ಸೀಲ್​ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಅಲ್ಲಿನ  ಜನ ನೀವು ಒಂದೇ ಸಮುದಾಯವನ್ನು ಗುರಿ ಮಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಜನರೆಲ್ಲ ಪೊಲೀಸರ ವಿರುದ್ಧ ವಾಗ್ದಾಳಿಗಿಳಿದಿದ್ದು, ಶಿವನಗರವನ್ನು ಕಂಟೈನ್ಮೆಂಟ್ ಝೋನ್ ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments