Home ರಾಜ್ಯ ಬೆಂಗಳೂರು ದುಷ್ಕರ್ಮಿಗಳಿಂದ ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಮಾರಣ ಹೋಮ

ದುಷ್ಕರ್ಮಿಗಳಿಂದ ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಮಾರಣ ಹೋಮ

ಚಿಕ್ಕಮಗಳೂರು: ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸತ್ತು ದಡಕ್ಕೆ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ವೈ.ಮಲ್ಲಾಪುರ ಗ್ರಾಮದ ದೊಡ್ಡನಾಯಕನಹಳ್ಳಿ ಕೆರೆಯನ್ನ ತಮ್ಮಯ್ಯ ಎಂಬ ಸ್ಥಳಿಯರು ಮೂರು ವರ್ಷಕ್ಕೆ ಟೆಂಡರ್ ಪಡೆದು ಸಾವಿರಾರು ಮೀನು ಮರಿಗಳನ್ನ ಬಿಟ್ಟು ಸಾಕಿದ್ದರು. ಮೀನುಗಳು ಕೂಡ ಹಿಡಿದು ಮಾರಾಟ ಮಾಡುವಷ್ಟು ದೊಡ್ಡವಾಗಿದ್ದವು. ಕಳೆದ ರಾತ್ರಿ ದುಷ್ಕರ್ಮಿಗಳು ಕೆರೆಗೆ ವಿಷಪ್ರಾಶಾನ ಮಾಡಿರುವುದರಿಂದ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ನೀರಲ್ಲಿ ತೇಲಿ ಬಂದು ದಡದಲ್ಲಿ ಶೇಖರಣೆಯಾಗಿವೆ. ಗಾಳಿ ಹೆಚ್ಚಿದಂತೆಲ್ಲಾ ನೀರಿನ ಅಲೆಯ ರಭಸಕ್ಕೆ ಸತ್ತ ಮೀನುಗಳು ಒಂದು ದಡದಿಂದ ಮತ್ತೊಂದು ದಡಕ್ಕೆ ತೇಲಿ ಹೋಗುತ್ತಿವೆ. ಲಕ್ಷಾಂತರ ರೂಪಾಯಿ ಹಣ ನೀಡಿ ಟೆಂಡರ್ ಮಾಡಿಕೊಂಡಿದ್ದ ಮಾಲೀಕ ತಮ್ಮಯ್ಯ ಮೀನಿನ ಸ್ಥಿತಿ ಕಂಡು ಸತ್ತ ಮೀನನ್ನ ಕೈಯಲ್ಲಿಡಿದು ಕಣ್ಣೀರಾಕಿದ್ದಾರೆ. ಹೆಂಡತಿ ವಡವೆ ಅಡವಿಟ್ಟು ಇದೇ ನನ್ನ ಬದುಕೆಂದು ಕೃಷಿ ಬಿಟ್ಟು ಮೀನು ಕೃಷಿಗೆ ಮುಂದಾಗಿದ್ದೆ. ಆದರೆ ದುಷ್ಕರ್ಮಿಗಳು ಈ ರೀತಿ ಮೀನಿಗೆ ವಿಷ ಹಾಕಿರೋದ್ರಿಂದ ನನ್ನ ಬದುಕು ಬೀದಿಗೆ ಬಿದ್ದಿದೆ ಎಂದು ಕಣ್ಣೀರಾಕಿದ್ದಾರೆ. ಈ ಮೀನು ಕೃಷಿ ಮೇಲೆ ನನ್ನ ಬದುಕು ಅವಲಂಬಿತವಾಗಿತ್ತು. ಇದೇ ಮೀನು ಕೃಷಿಯಿಂದ ಹೆಂಡತಿ-ಮಕ್ಕಳನ್ನ ಸಾಕುತ್ತಿದ್ದೆ. ಈಗ ಬದುಕೋದು ಹೇಗೆಂದು ಅವಲತ್ತು ತೋಡಿಕೊಂಡಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here

- Advertisment -

Most Popular

‘ಗದಗನಲ್ಲಿ ಕಾಲೇಜ್ ಓಪನ್ ರೂಲ್ಸ್ ಬ್ರೇಕ್’

ಗದಗ: 10 ತಿಂಗಳ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಸಂಪೂರ್ಣ ಆರಂಭವಾಗಿವೆ. ಆದರೆ ಗದಗ ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸರ್ಕಾರದ ಕೊರೋನಾ ರೂಲ್ಸ್ ಗಳು ಪಾಲನೆ ಆಗುತ್ತಿಲ್ಲ. ಚಿಕ್ಕ...

‘ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆ’

ಗದಗ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗದಗ ಜಿಲ್ಲೆಯಲ್ಲಿ ಕೂಡ ನಿಧಿ ಸಂಗ್ರಹಣೆ ಕಾರ್ಯ ನಡೆಯಿತು. ವಿಶ್ವ ಹಿಂದು ಪರಿಷತ, ಭಜರಂಗದಳ ನೇತೃತ್ವದಲ್ಲಿ ನಿಧಿ ಸಂಗ್ರಹಣೆಗೆ ಮುಂದಾಗಿದ್ದಾರೆ. ನಗರದ ಜೋಡು ಮಾರುತೇಶ್ವರ ದೇವಸ್ಥಾನದಲ್ಲಿ...

ಸಿಎಂ ಅವರ ಸಿಡಿ ಇದ್ರೆ ಕೊಡಿ, ಸುಮ್ನೆ ಹೆದರಿಸುವದು ಏಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜಕಾರಣದಲ್ಲಿ ಆಸೆ ಇರುವದು ತಪ್ಪಲ್ಲ. ಆದರೆ ಬಹಿರಂಗ ಹೇಳಿಕೆ ನೀಡುವದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಶಾಸಕ ಅಸಮಾಧಾನವನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ. ಆದರೆ...

‘ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ ನಿರ್ಮಾಣ ಶಿಲಾನ್ಯಾಸ’

ಹುಬ್ಬಳ್ಳಿ: 298 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 63, 218 ಹಾಗೂ 4 ನ್ನು ಸಂಪರ್ಕಿಸುವ 3.6 ಕೀ.ಮೀ ಉದ್ದದ ಚೆನ್ನಮ್ಮ ವೃತ್ತದ ಮೇಲು ರಸ್ತೆ, 25 ಕೋಟಿ ವೆಚ್ಚದಲ್ಲಿ ಕಲಘಟಗಿ ರಾಷ್ಟ್ರೀಯ...

Recent Comments