ನವದೆಹಲಿ : ಮಾನವ ಕಂಪ್ಯೂಟರ್ ಅಂತ ಖ್ಯಾತಿ ಪಡೆದಿದ್ದ ಕನ್ನಡತಿ, ಗಣಿತ ಶಾಸ್ತ್ರಜ್ಞೆ ಶಕುಂತಲಾ ದೇವಿ ಅವರ ಸಾಧನೆ 40 ವರ್ಷಗಳ ಬಳಿಕ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದೆ. ಅವರು ಸಾಧನೆಗೈದು 40 ವರ್ಷ, ವಿಧಿವಶರಾಗಿ 7 ವರ್ಷದ ನಂತರ ಕೊನೆಗೂ ಗಿನ್ನಿಸ್ ಪ್ರಮಾಣಪತ್ರ ಲಭಿಸಿದೆ.
1980ರಲ್ಲಿ ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ಶಕುಂತಲಾ ದೇವಿಯವರು 13 ಅಂಕಿಗಳ ಎರಡು ಸಂಖ್ಯೆಗಳನ್ನು ಕೇವಲ 28 ಸೆಕೆಂಡ್ನಲ್ಲಿ ಗುಣಿಸಿ ದಾಖಲೆ ನಿರ್ಮಿಸಿದ್ರು. ಅಷ್ಟುದೊಡ್ಡ ಸಂಖ್ಯೆಯನ್ನು ಯಾರೂ ಮನಸ್ಸಲ್ಲಿ ಗುಣಿಸಿರದಷ್ಟು ಬೇಗ ಅವರು ಗುಣಿಸಿದ್ದರು. ಅವರ ಆ ಸಾಧನೆ 1982ರಲ್ಲೇ ಗಿನ್ನಿಸ್ಗೆ ಸೇರ್ಪಡೆಯಾಗಿತ್ತು. ಆದ್ರೆ ಕೆಲವು ಆಕ್ಷೇಪಗಳಿಂದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಂದ ಪ್ರಮಾಣಪತ್ರ ಸಿಕ್ಕಿರ್ಲಿಲ್ಲ.
ಶಕುಂತಲಾ ದೇವಿಯವರ ಬಯೋಪಿಕ್ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ. ಬಾಲಿವುಡ್ ನಟಿ ವಿದ್ಯಾಬಾಲನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶಕುಂತಲಾ ದೇವಿ ಸಾಧನೆಗೆ ಇನ್ನೂ ಕೂಡ ಗಿನ್ನಿಸ್ ಪ್ರಮಾಣಪತ್ರ ಸಿಕ್ಕಿಲ್ಲ ಅನ್ನೋದು ಚಿತ್ರತಂಡಕ್ಕೆ ಗೊತ್ತಾಗಿತ್ತು. ಹಾಗಾಗಿ ಚಿತ್ರತಂಡ ಪತ್ರವ್ಯವಹಾರ ನಡೆಸಿ ಗಿನ್ನಿಸ್ ಪ್ರಮಾಣಪಯ್ತ ಸಿಗುತವಂತೆ ಮಾಡಿದೆ. ಲಂಡನ್ನಲ್ಲಿ ಶಕುಂತಲಾ ದೇವಿಯವರ ಪುತ್ರಿ ಅನುಪಮಾ ಬ್ಯಾನರ್ಜಿಗೆ ಗುರುವಾರ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಹಸ್ತಾಂತರವಾಗಿದೆ.
1929 ನವೆಂಬರ್ 4ರಂದು ಜನಿಸಿದ್ದ ಶಕುಂತಲಾ ದೇವಿ 2013ರ ಏಪ್ರಿಲ್ 21ರಂದು ತಮ್ಮ 84ನೇ ವಯಸ್ಸಲ್ಲಿ ನಿಧನರಾದರು.