ಬೆಂಕಿ ಅವಘಡಕ್ಕೆ 69ಕ್ಕೂ ಹೆಚ್ಚು ಮಂದಿ ದುರ್ಮರಣ

0
309

ಢಾಕಾ : ಬೆಂಕಿ ಅವಘಡದಿಂದ 69ಕ್ಕೂ ಹೆಚ್ಚು ಮಂದಿ ದುರ್ಮರಣವನ್ನಪ್ಪಿದ ಘಟನೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದಿದೆ.
ಢಾಕಾದ ಚೌಕ್​ಬಜಾರ್​ನಲ್ಲಿ ಗ್ಯಾಸ್​ ಸಿಲೆಂಡರ್​ನಿಂದ ಬೆಂಕಿ ಹತ್ತಿಕೊಂಡು ಅಪಾರ್ಟ್ಮೆಂಟ್​ವೊಂದರಲ್ಲಿ ಈ ಘಟನೆ ನಡೆದಿದೆ. ಕೆಮಿಕಲ್​ಗಳು (ರಾಸಾಯನಿಕಗಳು) ಸಂಗ್ರಹವಿದ್ದ ಕಟ್ಟಡಕ್ಕೆ ತಗುಲಿ ಬಹುಬೇಗ ವ್ಯಾಪಕವಾಗಿ ಹಬ್ಬಿದೆ. ಇದರಿಂದ ಕ್ಷಣಾರ್ಧರಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯ ಕೆನ್ನಾಲಿಗೆ ಅಕ್ಕ-ಪಕ್ಕದ ಕಟ್ಟಡಗಳಿಗೂ ಚಾಚಿದ್ದು, ಇನ್ನೂ ಹೆಚ್ಚಿನ ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ. ಸುಮಾರು 200 ಅಗ್ನಿಶಾಮಕ ವಾಹನಗಳ ನೆರವಿನಿಂದ ಬೆಂಕಿ ನೊಂದಿಸುವ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here