ಗ್ರೀಟಿಂಗ್​ ಕಾರ್ಡ್​ ಕಾರ್ಖಾನೆಗೆ ಬೆಂಕಿ

0
280

ದೆಹಲಿ: ನರೈನಾ ಇಂಡಸ್ಟ್ರಿಯಲ್​ ಪ್ರದೇಶದಲ್ಲಿರುವ ಗ್ರೀಟಿಂಗ್​ ಕಾರ್ಡ್ ಕಾರ್ಖಾನೆಯಲ್ಲಿ ಗುರುವಾರ ಬೆಳಗ್ಗೆ 7.15ರ ಹೊತ್ತಿಗೆ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹರಡುತ್ತಿದ್ದು 29 ಫೈರ್​ ಎಂಜಿನ್​ಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರೇಮಿಗಳ ದಿನಾಚರಣೆಯಂದೇ ಅವಘಡ ಸಂಭವಿಸಿದ್ದು ಹೆಚ್ಚಿನ ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆ ಇದೆ ಅಂತ ತಿಳಿದುಬಂದಿದೆ. ಇದು ಕಳೆದ ಎರಡು ದಿನಗಳಲ್ಲಿ ದೆಹಲಿಯಲ್ಲಿ ನಡೆದಿರುವ ಎರಡನೇ ಬೆಂಕಿ ಅವಘಡವಾಗಿದೆ. ಕರೋಲ್​ಬಾಗ್​ನಲ್ಲಿ ಅರ್ಪಿತ್​ ಪ್ಯಾಲೇಸ್​ ಹೊಟೇಲ್​ನಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿ 17 ಜನ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here