Saturday, May 21, 2022
Powertv Logo
Homeರಾಜ್ಯಹುಬ್ಬಳ್ಳಿ ಗಲಭೆ : ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಕಣ್ಣೀರು

ಹುಬ್ಬಳ್ಳಿ ಗಲಭೆ : ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಕಣ್ಣೀರು

ಹುಬ್ಬಳ್ಳಿ : ಗಲಭೆ ನಡೆದು ಎರಡು ದಿನಗಳಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೂಡ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಾಜಕೀಯ ಬಣ್ಣ ಪಡೆಯುತ್ತಿದೆ.

ಗಲಭೆಯಿಂದ ನಲುಗಿದ್ದ ಹುಬ್ಬಳ್ಳಿ ಇನ್ನೇನು ಸಹಜ ಸ್ಥಿತಿಗೆ ಬಂತು ಅನ್ನುವಷ್ಟರಲ್ಲಿ ರಾಜಕಾರಣಿಗಳು ಕೆಸರೆರಚಾಟಕ್ಕೆ ನಿಂತಿದ್ದಾರೆ. ಗಲಭೆಗೆ ಸಂಬಂಧಿಸಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ.ಈವರೆಗೂ ಒಟ್ಟು 106 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಲಬುರಗಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಲ್ಲಿ ಕೆಲವರು ಅಮಾಯಕರಿದ್ದು, ಗಲಭೆಗೆ ಬಿಜೆಪಿಯೇ ಕಾರಣ ಅಂತ ಕಾಂಗ್ರೆಸ್​​​ ಆರೋಪಿಸಿದೆ.

ಇನ್ನು ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಧಾರವಾಡ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಲ್ತಾಫ್​ ಹಳ್ಳೂರ ಪ್ರತಿಕ್ರಿಯಿಸಿದ್ದಾರೆ. ಕೋಮು ಗಲಭೆ ಸೃಷ್ಟಿಸಷ್ಟಿಲು ನಾನು ಘಟನಾ ಸ್ಥಳಕ್ಕೆ ಹೋಗಿಲ್ಲ. ಶಾಂತಿ ಕಾಪಾಡುವುದಕ್ಕೆ ಅಲ್ಲಿಗೆ ಹೋಗಿದ್ದೆ.ನಾನು ಪ್ರಚೋದನೆ ಮಾಡುತ್ತಿರಲಿಲ್ಲ, ನಮ್ಮ ಜನರನ್ನ ಸಮಾಧಾನ ಮಾಡುತ್ತಿದ್ದೆ. ಜನರಿಗೆ ಧ್ವನಿ ಜೋರಾಗಿ ಕೇಳುತ್ತೆ ಅನ್ನೋ ಕಾರಣಕ್ಕೆ ವಾಹನದ ಮೇಲೆ ನಿಂತಿದ್ದೆ. ಅಲ್ಲದೆ, ಗಲಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಸ್ಥಳೀಯರಲ್ಲ. ಪ್ರತಿಭಟನೆಯಲ್ಲಿದ್ದ 10-20 ಜನ ಮಾತ್ರ ನಂಗೆ ಗೊತ್ತು. ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಸ್ಥಳೀಯರಲ್ಲ. ಗಲಭೆ ವೇಳೆ ಜೈ ಶ್ರೀರಾಮ್‌ ಎಂದು ಕೆಲ ಜನರು ಕೂಗಿದ್ದಾರೆ.ಈ ಗಲಾಟೆಗೆ ಪೋಸ್ಟ್​​ ಮಾಡಿದವರೇ ಕಾರಣ. ಇದರ ಹಿಂದೆ ದೊಡ್ಡ ಹಿಂದೂ ಸಂಘಟನೆ ಕೈವಾಡವಿದೆ ಅಂತಾ ಗಲಭೆ ವೇಳೆ ಮೌಲ್ವಿ ಜೊತೆ ನಿಂತಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹುಬ್ಬಳ್ಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ ಗಲಭೆ ರಾಜ್ಯವ್ಯಾಪಿ ಸುದ್ದಿಯಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

- Advertisment -

Most Popular

Recent Comments