Home uncategorized 15 ಕಡೆಗಳಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ | ದಿನಕ್ಕೆ ಸಾವಿರ ತಪಾಸಣೆ ಗುರಿ -...

15 ಕಡೆಗಳಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ | ದಿನಕ್ಕೆ ಸಾವಿರ ತಪಾಸಣೆ ಗುರಿ – ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಹುಬ್ಬಳ್ಳಿ : ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವಳಿನಗರದಲ್ಲಿ 15 ಕಡೆಗಳಲ್ಲಿ rapid ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ತಪಾಸಣೆ ವಾಹನಗಳ ಮೂಲಕ ಕೊವೀಡ್ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ನಗರದ ದುರ್ಗದಬೈಲ್ ನಲ್ಲಿ rapid ಆ್ಯಂಟಿಜೆನ್ ಟೆಸ್ಟ್ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಇಂದಿನಿಂದ ಚಾಲನೇ ನೀಡಲಾಗಿದ್ದು, ಉತ್ತಮವಾಗಿ ಪ್ರಾರಂಭಗೊಂಡಿದೆ. ಅಲ್ಲದೇ ಸಾರ್ವಜನಿಕ ಸ್ಪಂದನೆ ಕೂಡ ಉತ್ತಮ ರೀತಿಯಲ್ಲಿ ಸಿಕ್ಕಿದೆ ಎಂದರು.

ಜನದಟ್ಟಣೆಯ ಪ್ರದೇಶಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ‌. ಅವಳಿನಗರದ 15 ಕಡೆಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ತಪಾಸಣೆ ನಡೆಯುತ್ತದೆ. ಅಲ್ಲದೇ ದಿನಕ್ಕೆ 1000 ತಪಾಸಣೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments