ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ತನ್ನ ಅಟ್ಟಹಾಸ ಮೇರೆಯುತ್ತಿರುವುದರಿಂದ ಸರಕಾರದ ಆದೇಶ ಮೇರೆಗೆ ಧಾರವಾಡ ಜಿಲ್ಲೆಯನ್ನು ನಾಳೆಯಿಂದ ಸಂಪೂರ್ಣವಾಗಿ ಹತ್ತು ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ದಿನನಿತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಮುಗಿ ಬಿದ್ದಿರುವ ದೃಶ್ಯಗಳು ಕಂಡು ಬಂದವು.
ಹೌದು ಕೊರೊನಾ ಬೀತಿ ಹಿನ್ನಲೆ ನಾಳೆಯಿಂದ ಜಿಲ್ಲೆಯನ್ನು ಲಾಕ್ ಡೌನ್ ಮಾಡಿದ್ದು.ಕೋರೊನಾ ಮುಕ್ತ ಮಾಡಲು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ದಿನವಿಡೀ ಮನವಿ ಮಾಡುತ್ತಾ ಬಂದಿದೆ. ಆದರೆ ಹುಬ್ಬಳ್ಳಿ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೊರೋನಾ ಬಗ್ಗೆ ಭಯವೇ ಇಲ್ಲ ಎಂಬಂತೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದು ತರಕಾರಿ ಹಾಗೂ ದಿನನಿತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.